ADVERTISEMENT
ಚಿನ್ನ ಮತ್ತು ಷೇರು ಮಾರುಕಟ್ಟೆ ಇವತ್ತು ನಾಗಾಲೋಟದಲ್ಲಿ ಏರಿಕೆ ಆಗಿದೆ.
10 ಗ್ರಾಂ ಬಂಗಾರದ ಬೆಲೆ ಇವತ್ತು 1,100 ರೂಪಾಯಿ ಗಡಿ ದಾಟಿದೆ. 10 ಗ್ರಾಂ ಚಿನ್ನದ ಬೆಲೆ 62 ಸಾವಿರದ 300 ರೂಪಾಯಿ ಗಡಿ ದಾಟಿದೆ.
ಷೇರು ಮಾರುಕಟ್ಟೆಯಲ್ಲೂ ಬೆಳಗ್ಗೆಯೇ ಭಾರೀ ಹೆಚ್ಚಳವಾಗಿದೆ.
ಮುಂಬೈ ಷೇರು ವಿನಿಮಯ (ಬಿಎಸ್ಇ) ಇದೇ ಮೊದಲ ಬಾರಿಗೆ 70 ಸಾವಿರ ಸೂಚ್ಯಂಕದ ಗಡಿ ದಾಟಿದೆ. ಬಿಎಸ್ಇ 70 ಸಾವಿರದ 355 ಅಂಕಗಳ ಗಡಿ ದಾಟಿದೆ.
ಇನ್ನು ನಿಫ್ಟಿ ಸೂಚ್ಯಂಕ 21,110 ಅಂಕಗಳ ಗಡಿ ಮೀರಿದೆ. ಇವತ್ತು ಬೆಳಗ್ಗೆ 9 ಗಂಟೆಯಿಂದ 220 ಅಂಕಗಳ ಏರಿಕೆ ಕಂಡಿದೆ.
ADVERTISEMENT