ಎಕ್ಸಿಟ್ ಪೋಲ್ಗಳ ಕಾರಣದಿಂದ ಷೇರು ಪೇಟೆಯಲ್ಲಿ ಸೂಚ್ಯಂಕ ಐತಿಹಾಸಿಕ ದಾಖಲೆಯ ಏರಿಕೆ ಕಂಡರೂ ಬಂಗಾರದ ಬೆಲೆಯಲ್ಲಿ ಇವತ್ತೂ ಭಾರೀ ಇಳಿಕೆಯಾಗಿದೆ.
24 ಕ್ಯಾರೆಟ್ ಗುಣಮಟ್ಟದ ಚಿನ್ನದ ಬೆಲೆ 440 ರೂಪಾಯಿ ಇಳಿಕೆಯಾಗಿದೆ. 22 ಕ್ಯಾರೆಟ್ ಗುಣಮಟ್ಟದ ಚಿನ್ನದ ಬೆಲೆ 10 ಗ್ರಾಂಗೆ 403 ರೂಪಾಯಿ ಕಡಿಮೆ ಆಗಿದೆ.
24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 75,699 ರೂಪಾಯಿಗೆ ಇಳಿದಿದೆ. 22 ಕ್ಯಾರೆಟ್ ಚಿನ್ನಕ್ಕೆ 10 ಗ್ರಾಂಗೆ 69,390 ರೂಪಾಯಿಗೆ ಇಳಿದಿದೆ.
ಈ ಮೂಲಕ ಕಳೆದ 4 ದಿನಗಳಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 1 ಸಾವಿರ ರೂಪಾಯಿಯಷ್ಟು ಇಳಿಕೆಯಾಗಿದೆ.
ADVERTISEMENT
ADVERTISEMENT