ಚಿನ್ನದ ಬೆಲೆಯಲ್ಲಿ ಇವತ್ತೂ ಏರಿಕೆ ಆಗಿದೆ. ಕೇಂದ್ರದಲ್ಲಿ ಮೂರನೇ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರವೇ ಬರುವುದು ಖಚಿತವಾದ ಬಳಿಕ ಎರಡನೇ ದಿನವೂ ಚಿನ್ನದ ಬೆಲೆಯಲ್ಲಿ ಏರಿಕೆ ಆಗಿದೆ.
22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 147 ರೂಪಾಯಿ ಮತ್ತು 24 ಕ್ಯಾರೆಟ್ ಗುಣಮಟ್ಟದ 10 ಗ್ರಾಂ ಚಿನ್ನದ ಬೆಲೆ 162 ರೂಪಾಯಿಯಷ್ಟು ಹೆಚ್ಚಳವಾಗಿದೆ.
ನಿನ್ನೆಯಷ್ಟೇ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 250 ರೂಪಾಯಿಯಷ್ಟು ಹೆಚ್ಚಳವಾಗಿದೆ. 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 270 ರೂಪಾಯಿಯಷ್ಟು ದುಬಾರಿಯಾಗಿದೆ.
22 ಕ್ಯಾರೆಟ್ ಗುಣಮಟ್ಟದ 10 ಗ್ರಾಂ ಚಿನ್ನದ ಬೆಲೆ ಇವತ್ತು 67,653 ರೂಪಾಯಿ ಮತ್ತು 24 ಕ್ಯಾರೆಟ್ ಗುಣಮಟ್ಟದ ಚಿನ್ನದ ಬೆಲೆ 10 ಗ್ರಾಂಗೆ 73,858 ರೂಪಾಯಿಗೆ ಏರಿದೆ.