ಚಿನ್ನದ ಬೆಲೆಯಲ್ಲಿ ಏರಿಕೆ ಮುಂದುವರೆದಿದೆ. ಇವತ್ತು 10 ಗ್ರಾಂ ಚಿನ್ನದ ಬೆಲೆ 63 ಸಾವಿರ ರೂಪಾಯಿ ಗಡಿ ದಾಟಿದೆ. ಇವತ್ತು 10 ಗ್ರಾಂ ಚಿನ್ನದ ಬೆಲೆ 150 ರೂಪಾಯಿಯಷ್ಟು ಏರಿಕೆ ಕಂಡಿದೆ.
ಷೇರು ಮಾರುಕಟ್ಟೆಯಲ್ಲೂ ಮಂಗಳವಾರ ಏರಿಕೆ ಆಗಿದೆ. ಬಿಎಸ್ಇ ಸೂಚ್ಯಂಕ 260 ಅಂಕಗಳಷ್ಟು ಏರಿದ್ದರೆ, ನಿಫ್ಟಿ 100 ಅಂಕಗಳಷ್ಟು ಹೆಚ್ಚಳವಾಗಿದೆ.
ಒಂದು ವಾರದಲ್ಲೇ ಚಿನ್ನದ ಬೆಲೆ 1,850 ರೂಪಾಯಿಯಷ್ಟು ಹೆಚ್ಚಳವಾಗಿದೆ.
ಶನಿವಾರ ಬಂಗಾರದ ದರ 461 ರೂಪಾಯಿಯಷ್ಟು ಹೆಚ್ಚಳವಾಗಿತ್ತು. ಶುಕ್ರವಾರ ಚಿನ್ನದ ಬೆಲೆ 506 ರೂಪಾಯಿಯಷ್ಟು ಹೆಚ್ಚಳವಾಗಿತ್ತು. ಗುರುವಾರ 260 ರೂಪಾಯಿಯಷ್ಟು ಹೆಚ್ಚಳ ಆಗಿತ್ತು.
ಕಳೆದ ಬುಧವಾರ ಬಂಗಾರದ ಬೆಲೆ 216 ರೂಪಾಯಿಯಷ್ಟು ಹೆಚ್ಚಳವಾಗಿತ್ತು.
ADVERTISEMENT
ADVERTISEMENT