ಕಳೆದ ಒಂದು ವಾರದಿಂದ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಬೆಂಗಳೂರಿನ ಬಹುತೇಕ ಬಾಗಗಳು ಅಸ್ತವ್ಯಸ್ತಗೊಂಡಿವೆ. ಇದೇ ವೇಳೆ, ಬೆಂಗಳೂರಿಗೆ ಕಾವೇರಿ ನೀರು ಸರಬರಾಜು ಮಾಡುವ ಮಂಡ್ಯದ ಪಂಪ್ಹೌಸ್ನಲ್ಲಿಯೂ ನೀರು ತುಂಬಿಕೊಂಡಿತ್ತು. ಇದರಿಂದ ಬೆಂಗಳೂರಿನಲ್ಲಿ ಕುಡಿಯುವ ನೀರಿಗೂ ತಾತ್ವಾರ ಉಂಟಾಗಿತ್ತು.
ಇದೀಗ, ಬೃಹತ್ ಬೆಂಗಳೂರು ನೀರು ಸರಬರಾಜು ಮಂಡಳಿ(BWSSB) ಬೆಂಗಳೂರಿನ ಜನತೆಗೆ ಗುಡ್ ನ್ಯೂಸ್ ನೀಡಿದೆ.
ಮಂಡ್ಯದ ಕೆ.ಟಿ.ಹಳ್ಳಿಯಲ್ಲಿ ಬೆಂಗಳೂರಿಗೆ ಕಾವೇರಿ ನೀರು ಸರಬರಾಜು ಮಾಡುವ ಪಂಪ್ ಹೌಸ್ ಇದೆ. ಈ ಪಂಪ್ ಹೌಸ್ ಕಳೆದ ಎರಡು ದಿನ ಮಳೆ ನೀರಿನಿಂದಾಗಿ ತುಂಬಿಕೊಂಡಿತ್ತು. ಈ ಪರಿಣಾಮದಿಂದ ಪಂಪ್ಹೌಸ್ ಆರಂಭಿಸಲಾಗದೇ, ಬೆಂಗಳೂರಿಗೆ ಕಾವೇರಿ ನೀರು ಸರಬರಾಜು ಮಾಡಲು ಆಗಿರಲಿಲ್ಲ. ಇದನ್ನೂ ಓದಿ : ಬೆಂಗಳೂರು ಮಳೆಯಲ್ಲಿ ನಟಿ ರಮ್ಯಾರ ರಾಜಕೀಯ ಪ್ರಶ್ನೆಗಳು
ಬೆಂಗಳೂರು ನೀರು ಸರಬರಾಜು ಮಂಡಳಿಯ (BWSSB) ಸಿಬ್ಬಂದಿ ಕಳೆದ 24 ಗಂಟೆಗಳ ಕಾಲ ನಿರಂತರ ಕೆಲಸ ಮಾಡುವ ಮೂಲಕ ಪಂಪ್ಹೌಸ್ ಮತ್ತೆ ಕಾರ್ಯಾರಂಭಿಸುವಂತೆ ಮಾಡಿದ್ದಾರೆ. ಆ ಮೂಲಕ ನಾಳೆ ಬುಧವಾರದಿಂದಲೇ ಬೆಂಗಳೂರಿಗೆ ಕಾವೇರಿ ನೀರು ಸರಬರಾಜು ಆಗಲಿದೆ.
Dear Bangaloreans,2nd pump
In 4th stage 2nd phase started successfully. pic.twitter.com/FHjBppCKFf— BWSSB (@chairmanbwssb) September 6, 2022
ಕೆಟಿ ಹಳ್ಳಿಯಲ್ಲಿನ ಪಂಪ್ಹೌಸ್ನಲ್ಲನ ಎಲ್ಲಾ 4 ಹಂತದ ಪಂಪ್ಸೆಟ್ಗಳು ಕಾರ್ಯ ಆರಂಭಿಸಿವೆ. ಇದನ್ನೂ ಓದಿ : Rain Effect – ಪ್ರಯಾಣಿಕರೇ ಗಮನಿಸಿ – ಬೆಂಗಳೂರು: ಮೈಸೂರು ನಡುವೆ ಸಂಚಾರ ಬೇಡ