ರೈತರಿಗೆ ಭೂ ಸರ್ವೇ ಸೆಟ್ಲ್ ಮೆಂಟ್ ಮತ್ತು ಭೂ ದಾಖಲೆಗಳ ಇಲಾಖೆ ಗುಡ್ ನ್ಯೂಸ್ ನೀಡಿದೆ. 11 ಇ, ಪೋಡಿ, ಭೂ ಪರಿವರ್ತನೆ, ಹದ್ದುಬಸ್ತು ಮತ್ತು ಇತರೆ ನಕ್ಷೆಗಳನ್ನು ಪಡೆಯಲು ಅರ್ಜಿದಾರ ರೈತರು, ಸರ್ವೇ ಇಲಾಖೆ ಕಚೇರಿಗಳಿಗೆ ಅಲೆದಾಡುವಂತಿಲ್ಲ. ಆನ್ ಲೈನ್ ಮೂಲಕವೇ ನಿಮಗೆ ಬೇಕಾದ ದಾಖಲೆಗಳನ್ನು ಪಡೆಯಬಹುದಾಗಿದೆ ಎಂದು ಭೂ ದಾಖಲೆಗಳ ಆಯುಕ್ತ ಮೌನೀಶ್ ಮೌದ್ಗೀಲ್ ತಿಳಿಸಿದ್ದಾರೆ.
ನಕ್ಷೆ ಸೇರಿ ಭೂಮಿಗೆ ಸಂಬಂಧಿಸಿದ ದಾಖಲೆಗಳಿಗೆ ಅರ್ಜಿ ಸಲ್ಲಿಸುವಾಗಲೇ ಶುಲ್ಕ ಪಾವತಿಸುವುದರಿಂದ ಆನ್ ಲೈನ್ ಮೂಲಕ ನಕ್ಷೆ ಮುದ್ರಿಸಿಕೊಳ್ಳಲು ಹೆಚ್ಚುವರಿಯಾಗಿ ಯಾವುದೇ ಶುಲ್ಕ ಪಾವತಿಸುವ ಅಗತ್ಯ ಇಲ್ಲ ಎಂದು ಭೂ ದಾಖಲೆಗಳ ಆಯುಕ್ತ ಮೌನೀಶ್ ಮೌದ್ಗೀಲ್ ಸ್ಪಷ್ಟಪಡಿಸಿದ್ದಾರೆ.
ಅರ್ಜಿಯನ್ನು ಅಧರಿಸಿ ನಕ್ಷೆ ಅನುಮೋದಿಸಿದ ತಕ್ಷಣ ವೆಬ್ ಸೈಟ್ ಲಿಂಕ್ (http://103.138.196.154/service19/Report/applicationDetails) ಮೂಲಕ ಅದನ್ನು ಮುದ್ರಿಸಿಕೊಳ್ಳಲು ಲಭ್ಯ ಇರುತ್ತದೆ. ಅದೇ ಲಿಂಕ್ ಬಳಸಿ ಅರ್ಜಿಯ ಸ್ಥಿತಿಗತಿಯನ್ನು ಅರ್ಜಿದಾರರು ತಿಳಿದುಕೊಳ್ಳಬಹುದಾಗಿದೆ.