ಬೆಂಗಳೂರು ಹೊರವಲಯದಲ್ಲಿ ಪುಂಡರ ಹಾವಳಿ ಹೆಚ್ಚುತ್ತಿದೆ. ಬೇಕು ಬೇಕು ಅಂತಲೇ ನಡು ರಸ್ತೆಲಿ ಕಿರಿಕ್ ತೆಗೆದು ಕಾರ್ನಲ್ಲಿದ್ದವರ ಮೇಲೆ ನಾಲ್ವರು ದಾಳಿ ನಡೆಸಲು ನೋಡಿದ ಘಟನೆ ರೋಡ್ ರೇಜ್ ಘಟನೆ ಗುರುವಾರ ಮಧ್ಯಾಹ್ನ 2.30ರ ಸುಮಾರಿಗೆ ಡಿಎಸ್ಆರ್ ರಿವೇರಾದಿಂದ ವರ್ತೂರು ಸಂಪರ್ಕಿಸುವ ರಸ್ತೆಯಲ್ಲಿ ನಡೆದಿದೆ.
ಎರಡು ಬೈಕ್ಗಳು ಕಾರ್ನವರಿಗೆ ಜಾಗ ಬಿಡದೇ ನಿಧಾನಕ್ಕೆ ಅಡ್ಡಾದಿಡ್ಡಿಯಾಗಿ ಸಾಗುತ್ತಿದ್ದವು. ಕಾರ್ ಚಾಲಕ ಹಾರ್ನ್ ಮಾಡಿದ್ದನ್ನೆ ನೆಪ ಮಾಡಿಕೊಂಡ ಪುಂಡರು, ವಿರಳ ವಾಹನ ಸಂಚಾರ ಇರುವ ಪ್ರದೇಶದಲ್ಲಿ ನಡು ರಸ್ತೆಯಲ್ಲಿ ಬೈಕ್ಗಳನ್ನು ನಿಲ್ಲಿಸಿ, ಕಾರನ್ನು ಅಡ್ಡಗಟ್ಟಿ ದಾಳಿ ನಡೆಸಿದ್ದರು.
ಎರಡು ಬೈಕ್ಗಳಲ್ಲಿದ್ದ ಪುಂಡರಿಗೆ ಇನ್ನಿಬ್ಬರು ಬೈಕ್ ಸವಾರರು ಜೊತೆಯಾದರು.. ಘಟನೆಯಲ್ಲಿ ಕಾರಿನ ಗಾಜು ಜಖಂ ಆಯಿತು.
ಆದರೆ. ಎದೆಗುಂದದ ಕಾರ್ ಚಾಲಕ ಚಾಕಚಕ್ಯತೆಯಿಂದ ಕಾರನ್ನು ರಿವರ್ಸ್ ಓಡಿಸಿ ಅಪಾಯದಿಂದ ಪಾರಾಗಿದ್ದರು.
@east_bengaluru @BlrCityPolice @blrcitytraffic . Incident occurred on the new road which is connecting from DSR rivera to Varthur. Goons on the street of Bangalore . Is there any action taken yet on it @DCPTrEastBCP pic.twitter.com/kk8uENgdeB
— RON (@ronmania2009) July 13, 2023
ಈ ಎಲ್ಲಾ ಘಟನಾವಳಿ ಕಾರ್ನ ಫ್ರಂಟ್ ಕೆಮರಾದಲ್ಲಿ ಸೆರೆ ಆಗಿತ್ತು. ಈ ಸಂಬಂಧ ಕಾರ್ ಮಾಲಿಕ ರೋನ್ ಬೆಂಗಳೂರು ನಗರ ಪೊಲೀಸರಿಗೆ ಟ್ವಿಟ್ಟರ್ ಮೂಲಕ ವೀಡಿಯೋ ಸಮೇತ ದೂರು ನೀಡಿದ್ದರು.
Arrested the said accused yesterday night.Strict action underway. pic.twitter.com/UfnVEQMpKE
— DCP WhiteField (@dcpwhitefield) July 14, 2023