ರಾಜ್ಯ ಸರ್ಕಾರ 24 ನಿಗಮ, ಮಂಡಳಿ, ಪ್ರಾಧಿಕಾರಗಳಿಗೆ ನೂತನ ಅಧ್ಯಕ್ಷರನ್ನು ನೇಮಿಸಿ ಸೋಮವಾರ ಆದೇಶ ಹೊರಡಿಸಿದೆ.
ಕೆಲ ದಿನಗಳ ಹಿಂದೆಯಷ್ಟೇ ರಾಜ್ಉ ಸರ್ಕಾರ 52 ನಿಗಮ, ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷರ ನೇಮಕಾತಿಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿತ್ತು. ಆದರೆ, ಈ ಪಟ್ಟಿಯಿಂದ ಶಾಸಕರು ಹಾಗೂ ಬಿಎಸ್ವೈ ಆಪ್ತರಿಗೆ ವಿನಾಯಿತಿ ನೀಡಲಾಗಿತ್ತು.
ಇದೀಗ, ನೂತನ ರಾಜ್ಯ ಸರ್ಕಾರ ನೇಮಕಾತಿಯನ್ನು ಆರಂಭ ಮಾಡಿದ್ದು, ಆರಂಭಿಕ ಹಂತದಲ್ಲಿ ವಿವಿಧ ಇಲಾಖೆಗಳಲ್ಲಿ 24 ನಿಗಮ, ಮಂಡಳಿ ಪ್ರಾಧಿಕಾರಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ಈ ಹಿಂದೆ ಅಧ್ಯಕ್ಷ ಸ್ಥಾನ ಹೊಂದಿದ್ದ ರಘು ಕೌಟಿಲ್ಯ, ಮಣಿರಾಜ ಶೆಟ್ಟಿ, ಕೆ.ವಿ. ನಾಗರಾಜ ಮತ್ತು ರೇವಣಪ್ಪ ಕೋಳಗಿ ಅವರಿಗೆ ಅವರಿಗೆ ಪುನಃ ಅವಕಾಶ ನೀಡಲಾಗಿದೆ. ಈ ಬಾರಿ ಬಿಜೆಪಿ ಕಾರ್ಯಕರ್ತರಿಗೇ ನೇಮಕಾತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ನಿಗಮ, ಮಂಡಳಿಗಳ ಅಧ್ಯಕ್ಷರ ಪಟ್ಟಿ :-
ಎಂ. ಸರವಣ – ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ
ದೇವೇಂದ್ರನಾಥ ಕೆ. ನಾದ್ – ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮ
ಚಂಗಾವರ ಮಾರಣ್ಣ – ಕಾಡುಗೊಲ್ಲ ಅಭಿವೃದ್ಧಿ ನಿಗಮ
ಕೆ.ಪಿ. ವೆಂಕಟೇಶ್ – ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ
ಎಂ.ಕೆ. ಶ್ರೀನಿವಾಸ್ (ಮಿರ್ಲೆ) – ವಸ್ತು ಪ್ರದರ್ಶನ ಪ್ರಾಧಿಕಾರ
ಎಂ.ಕೆ. ವಾಸುದೇವ್ – ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ
ಎನ್.ಎಂ. ರವಿನಾರಾಯಣ ರೆಡ್ಡಿ – ದ್ರಾಕ್ಷಿ ಮತ್ತು ವೈನ್ ಮಂಡಳಿ
ಚಂದ್ರಶೇಖರ ಕವಟಗಿ – ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ
ಬಿ.ಸಿ. ನಾರಾಯಣಸ್ವಾಮಿ – ರೇಷ್ಮೆ ಮಾರಾಟ ಮಂಡಳಿ
ಗೌತಮ್ ಗೌಡ ಎಂ. – ರೇಷ್ಮೆ ಉದ್ಯಮಗಳ ನಿಗಮ
ಮಣಿರಾಜ ಶೆಟ್ಟಿ – ಗೇರು ಅಭಿವೃದ್ಧಿ ನಿಗಮ
ಗೋವಿಂದ ಜಟ್ಟಪ್ಪ ನಾಯ್ಕ – ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ
ಎಂ. ಶಿವಕುಮಾರ್ – ಮೃಗಾಲಯ ಪ್ರಾಧಿಕಾರ
ಎನ್. ರೇವಣಪ್ಪ ಕೋಳಗಿ – ಅರಣ್ಯ ಅಭಿವೃದ್ಧಿ ನಿಗಮ
ಎನ್.ಎಂ. ರವಿ ಕಾಳಪ್ಪ – ಜೀವವೈವಿಧ್ಯ ಮಂಡಳಿ
ಎ.ವಿ. ತೀರ್ಥರಾಮ – ಮೀನುಗಾರಿಕೆ ಅಭಿವೃದ್ಧಿ ನಿಗಮ
ಎಂ.ಎಸ್. ಕರಿಗೌಡ್ರ – ಮಾರ್ಕೆಟಿಂಗ್ ಕಮ್ಯುನಿಕೇಷನ್ಸ್ ಅಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್
ರಘು ಕೌಟಿಲ್ಯ – ಮೈಸೂರು ಪೇಂಟ್ಸ್ ಮತ್ತು ವಾರ್ನಿಷ್ ನಿಯಮಿತ
ಗುತ್ತಿಗನೂರು ವಿರುಪಾಕ್ಷಗೌಡ – ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮ
ಕೆ.ವಿ. ನಾಗರಾಜ – ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ
ಮಾರುತಿ ಮಲ್ಲಪ್ಪ ಅಷ್ಟಗಿ – ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ
ಕೊಲ್ಲಾ ಶೇಷಗಿರಿ ರಾವ್ – ತುಂಗಭದ್ರಾ ಯೋಜನೆ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ
ಜಿ. ನಿಜಗುಣರಾಜು – ಕಾವೇರಿ ಜಲಾನಯನ ಯೋಜನೆ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ
ಮಲ್ಲಿಕಾರ್ಜುನ ಬಸವಣ್ಣಪ್ಪ ತುಬಾ ಕಿ– ರಾಜ್ಯ ಮದ್ಯಪಾನ ಸಂಯಮ ಮಂಡಳಿ
2019ರಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿನ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಿಗಮ, ಮಂಡಳಿ, ಪ್ರಾಧಿಕಾರಗಳಿಗೆ ನೂತನ ಅಧ್ಯಕ್ಷರನ್ನು ನೇಮಿಸಲಾಗಿತ್ತು.