No Result
View All Result
ಉಚಿತ ಯೋಜನೆಗಳಿಂದ ಆರ್ಥಿಕ ಹೊರೆ ಆಗಲಿದೆ ಎಂಬ ಬಗ್ಗೆ ನೀತಿ ಆಯೋಗ ಯಾವುದೇ ಅಧ್ಯಯನವನ್ನೂ ನಡೆಸಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಸಂಸತ್ತಿಗೆ ಉತ್ತರಿಸಿದೆ.
ಅಲ್ಲದೇ ಉಚಿತ ಯೋಜನೆಗಳಿಂದ ದೇಶದ ಆರ್ಥಿಕತೆ ಮತ್ತು ಪ್ರಜಾಪ್ರಭುತ್ವದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಲು ತಜ್ಞರ ಸಮಿತಿಯನ್ನು ರಚಿಸುವಂತೆ ಸುಪ್ರೀಂಕೋರ್ಟ್ ಯಾವುದೇ ನಿರ್ದೇಶನವನ್ನೂ ನೀಡಿಲ್ಲ ಎಂದು ಪ್ರಧಾನಿ ಮೋದಿ ಸರ್ಕಾರ ಹೇಳಿದೆ.
ರಾಜ್ಯಸಭಾ ಸಂಸದ ನೀರಜ್ ದಂಗಿ ಅವರು ರಾಜ್ಯಸಭೆಯಲ್ಲಿ ಕೇಂದ್ರ ಯೋಜನೆ ಮತ್ತು ಸಾಂಖ್ಯಿಕ ವ್ಯವಹಾರಗಳ ಸಚಿವ ರಾವ್ ಇಂದ್ರಜಿತ್ ಸಿಂಗ್ ಅವರಿಗೆ ಪ್ರಶ್ನೆಯನ್ನು ಕೇಳಿದರು.
1. ಉಚಿತ ಯೋಜನೆಗಳಿಂದ ವಿತ್ತೀಯ ಕೊರತೆ, ಸಾಲದ ಹೊರೆ ಮತ್ತು ಹಣದುಬ್ಬರ ಹಾಗೂ ಆರ್ಥಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಮತ್ತು ದೇಶದ ಸಮಗ್ರ ಆರ್ಥಿಕತೆ ಮೇಲೆ ಪರಿಣಾಮ ಬೀರುವ ಬಗ್ಗೆ ನೀತಿ ಆಯೋಗ ಅಧ್ಯಯನ ನಡೆಸಿದೆಯೇ..? ಒಂದು ವೇಳೆ ನಡೆಸಿದ್ದರೆ ಆ ಬಗ್ಗೆ ಮಾಹಿತಿಯನ್ನು ತಿಳಿಸಿ.
2. ಉಚಿತ ಯೋಜನೆಗಳಿಂದ ದೇಶದ ಆರ್ಥಿಕತೆ ಮತ್ತು ಪ್ರಜಾಪ್ರಭುತ್ವದ ಮೇಲೆ ಆಗುವ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸುವುದಕ್ಕೆ ತಜ್ಞರ ಸಮಿತಿಯನ್ನು ರಚಿಸುವಂತೆ ಸುಪ್ರೀಂಕೋರ್ಟ್ ಶಿಫಾರಸ್ಸು ಅಥವಾ ಆದೇಶವನ್ನು ಕೊಟ್ಟಿದೆಯೇ..? ಆ ಕುರಿತ ವಿವರ ನೀಡಿ.
ಈ ಎರಡು ಪ್ರಶ್ನೆಗಳಿಗೆ ಪ್ರಧಾನಿ ಮೋದಿ ಸರ್ಕಾರದ ಸಚಿವ ರಾವ್ ಇಂದ್ರಜಿತ್ ಸಿಂಗ್ ಕೊಟ್ಟಿರುವ ʻನೋ ಸರ್, ನೋ ಸರ್ʼ ಎಂದು.
No Result
View All Result
error: Content is protected !!