ಆರತಕ್ಷತೆಯ ವೇಳೆಯೇ ಕುಸಿದು ಬಿದ್ದಿರುವ ವರ ಸಾವನ್ನಪ್ಪಿರುವ ಮನಕಲುಕುವ ಘಟನೆ ಬುಧವಾರ ನಡೆದಿದೆ.
ಹೊನ್ನೂರ ಸ್ವಾಮಿ(26) ಮೃತ ದುರ್ದೈವಿ ಮದುಮಗನಾಗಿದ್ದಾರೆ. ವಿಜಯನಗರ ಜಿಲ್ಲೆಯ ಪಾಪಿನಾಯಕನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಆರತಕ್ಷತೆಯ ಮಂಟಪದಲ್ಲಿಯ ಫೋಟೋ ಸೆಷನ್ ವೇಳೆ ವರ ಹೊನ್ನೂರಪ್ಪ ಅಸ್ವಸ್ಥಗೊಂಡಿದ್ದಾನೆ.
ತೀವ್ರ ಎದೆನೋವಿನಿಂದ ಬಳಲುತ್ತಿದ್ದ ವರ ಹೊನ್ನೂರಪ್ಪ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ವೈದ್ಯರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದರು.
ಆದರೆ, ದುರಾದೃಷ್ಟವಶಾತ್ ವರನನ್ನು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆಯೇ ಹೊನ್ನೂರಪ್ಪ ಮೃತಪಟ್ಟಿದ್ದಾನೆ.
ನಿನ್ನೆ ಆರತಕ್ಷತೆ ನಡೆದು ಇಂದು ಹಸೆಮಣೆ ಏರಬೇಕಿದ್ದ ಹೊನ್ನೂರಪ್ಪ ಸಾವಿನ ಮನೆಯ ಬಾಗಿಲು ತಟ್ಟಿದ್ದಾನೆ. ಕುಟುಂಬದಲ್ಲಿ ಸೂತಕದ ಚಾಯೆ ಆವರಿಸಿದೆ.