ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಆಗಿರುವ ತಾಂತ್ರಿಕ ಸಮಸ್ಯೆಗಳ ನಿವಾರಣೆಗೆ ನಾಳೆಯಿಂದ ಮೂರು ದಿನಗಳ ಕಾಲ ರಾಜ್ಯ ಸರ್ಕಾರವೇ ಶಿಬಿರ ಆಯೋಜಿಸಿದೆ. ಆಯಾಯ ಗ್ರಾಮ ಪಂಚಾಯತ್ ಮಟ್ಟದಲ್ಲಿ ಡಿಸೆಂಬರ್ 27ರ ಬುಧವಾರದಿಂದ ಡಿಸೆಂಬರ್ 29ರವರೆಗೆ ವಿಶೇಷ ಶಿಬಿರ ನಡೆಯಲಿದೆ.
ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸತತ ಮೂರು ದಿನ ವಿಶೇಷ ಶಿಬಿರ ನಡೆಯಲಿದೆ.
ಈ ವೇಳೆ ಗೃಹಲಕ್ಷ್ಮೀ ಯೋಜನೆಯ ಮಹಿಳಾ ಫಲಾನುಭವಿಗಳು ತರಬೇಕಿರುವ ದಾಖಲೆಗಳ ಪಟ್ಟಿ ಈ ರೀತಿ ಇದೆ: 1) ನಿಮ್ಮ ಆಧಾರ್ ಕಾರ್ಡ್ 2) ನಿಮ್ಮ ಪತಿಯ ಆಧಾರ್ ಕಾರ್ಡ್ 3) ಬ್ಯಾಂಕ್ ಪಾಸ್ ಪುಸ್ತಕ 3) ಪಡಿತರ ಚೀಟಿ
ಮೂರು ದಿನದ ಶಿಬಿರದಲ್ಲಿ 4 ದಾಖಲೆಗಳನ್ನು ತಂದರೆ ನಾಲ್ಕು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. 1) ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಸಂಖ್ಯೆ ಜೋಡಣೆ 2) ಬ್ಯಾಂಕ್ ಅಕೌಂಟ್ನಲ್ಲಿ ಆಗಿರಬಹುದಾದ ಸಮಸ್ಯೆ 3) ಹೊಸದಾಗಿ ಇ-ಕೆವೈಸಿ ಅಪ್ಡೇಟ್ 4) ಬ್ಯಾಂಕ್ ಖಾತೆ ಇಲ್ಲದವರು ಹೊಸ ಬ್ಯಾಂಕ್ ಖಾತೆ ಆರಂಭಿಸಬಹುದು.
ಗೃಹಲಕ್ಷ್ಮಿ ಯೋಜನೆ ಅರ್ಜಿದಾರರಿಗೆ ಸಂಬಂಧಿಸಿದ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲು ಬುಧವಾರದಿಂದ ಶುಕ್ರವಾರದವರೆಗೆ ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ವಿಶೇಷ ಶಿಬಿರ ಆಯೋಜಿಸಲಾಗಿದೆ.
ಪಂಚಾಯತ್ ರಾಜ್ ಅಧಿಕಾರಿಗಳ (PDO) ನೇತೃತ್ವದಲ್ಲಿ ಶಿಬಿರ ನಡೆಯಲಿದ್ದು, ಬಾಪೂಜಿ ಸೇವಾ ಕೇಂದ್ರದ ಕಂಪ್ಯೂಟರ್ ನಿರ್ವಾಹಕರು, ಅಂಗನವಾಡಿ ಕಾರ್ಯಕರ್ತರು, ಎಲೆಕ್ಟ್ರಾನಿಕ್ ಡೆಲಿವರಿ ಆಫ್ ಸಿಟಿಜನ್ ಸರ್ವಿಸಸ್ (ಇ.ಡಿ.ಸಿ) ತಂಡಗಳ ಸಿಬ್ಬಂದಿ, ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಹಾಗೂ ಇತರ ಬ್ಯಾಂಕ್‌ಗಳ ಪ್ರತಿನಿಧಿಗಳು ಈ ಶಿಬಿರದಲ್ಲಿ ಭಾಗವಹಿಸುತ್ತಾರೆ.
ADVERTISEMENT
ADVERTISEMENT