ಸರಕು ಮತ್ತು ಸೇವಾ ತೆರಿಗೆ ಸಂಗ್ರಹ ಇಳಿಕೆ ಆಗಿದೆ. ಏಪ್ರಿಲ್ ತಿಂಗಳಲ್ಲಿ ದಾಖಲೆಯ 1 ಲಕ್ಷದ 68 ಸಾವಿರ ಕೋಟಿ ರೂಪಾಯಿ ಇದ್ದ ತೆರಿಗೆ ಸಂಗ್ರಹ ಮೇ ತಿಂಗಳಲ್ಲಿ 1 ಲಕ್ಷದ 41 ಸಾವಿರ ಕೋಟಿ ರೂಪಾಯಿಗೆ ಇಳಿದಿದೆ.
ಮಾರ್ಚ್ ತಿಂಗಳಿAದ ಸತತ ಮೂರನೇ ತಿಂಗಳೂ ಜಿಎಸ್ಟಿ ಸಂಗ್ರಹ 1 ಲಕ್ಷದ 41 ಸಾವಿರ ಕೋಟಿ ರೂಪಾಯಿ ದಾಟಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.
ಮೇ ತಿಂಗಳಲ್ಲಿ 1 ಲಕ್ಷದ 41 ಸಾವಿರ ಕೋಟಿ ರೂಪಾಯಿ ಜಿಎಸ್ಟಿ ಸಂಗ್ರಹ ಆಗಿದ್ದು, ಅದರಲ್ಲಿ ಕೇಂದ್ರ ಜಿಎಸ್ಟಿ 25.036 ಕೋಟಿ ರೂಪಾಯಿ ಮತ್ತು ರಾಜ್ಯ ಜಿಎಸ್ಟಿ 32,001 ಕೋಟಿ ರೂಪಾಯಿ ಮತ್ತು ಸಂಯೋಜಿತ ಜಿಎಸ್ಟಿ 73,345 ಕೋಟಿ ರೂಪಾಯಿ ಇದೆ. 10,502 ಕೋಟಿ ರೂಪಾಯಿ ಉಪ ತೆರಿಗೆಯನ್ನೂ ಸಂಗ್ರಹಿಸಲಾಗಿದೆ.