ಸಿನಿಮಾ ಮಂದಿರಗಳಲ್ಲಿ (Cinema Halls) ಮಾರಲಾಗುವ ತಿನಿಸು ಮತ್ತು ಪಾನೀಯದ ಮೇಲಿನ ಜಿಎಸ್ಟಿ (GST) ತೆರಿಗೆಯನ್ನು ಶೇಕಡಾ 13ರಷ್ಟು ಇಳಿಸಲಾಗಿದೆ.
ಥಿಯೇಟರ್ಗಳಲ್ಲಿ ಮಾರಲಾಗುವ ತಿನಿಸು ಮತ್ತು ಪಾನೀಯದ ಮೇಲೆ ಶೇಕಡಾ 18ರಷ್ಟಿದ್ದ ತೆರಿಗೆಯನ್ನು ಶೇಕಡಾ 5ಕ್ಕೆ ಇಳಿಸಲಾಗಿದೆ.
ಅಂದರೆ ಪ್ರತಿ 100 ರೂಪಾಯಿ ಮೊತ್ತದ ಖರೀದಿಗೆ 18 ರೂಪಾಯಿ ತೆರಿಗೆ ಬದಲು 5 ರೂಪಾಯಿ ತೆರಿಗೆ ಪಾವತಿಸಬೇಕಾಗುತ್ತದೆ.
ಆದರೆ ಸಿನಿಮಾ ಟಿಕೆಟ್ ಖರೀದಿ ಜೊತೆಗೆಯೇ ಒಂದು ವೇಳೆ ತಿನಿಸು ಮತ್ತು ಪಾನೀಯ ಖರೀದಿಸಿದ್ರೆ ಆಗ ಶೇಕಡಾ 12ರಷ್ಟು ಜಿಎಸ್ಟಿ ಪಾವತಿಸಬೇಕಾಗುತ್ತದೆ.
ದೆಹಲಿಯಲ್ಲಿ ನಡೆದ ಜಿಎಸ್ಟಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ADVERTISEMENT
ADVERTISEMENT