ತಾವು ಕಣ್ಣೀರು ಹಾಕಿದ ಸಿನಿಮಾಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ತೆರಿಗೆ ವಿನಾಯಿತಿ ನೀಡಿ ಅಚ್ಚರಿ ಮೂಡಿಸಿದ್ದಾರೆ.
ರಕ್ಷಿತ್ ಶೆಟ್ಟಿ ನಟನೆ ಮತ್ತು ನಿರ್ಮಾಣದ ಅಭಿನಯದ 777 ಚಾರ್ಲಿ ಸಿನಿಮಾಕ್ಕೆ ಸರಕು ಮತ್ತು ಸೇವಾ ತೆರಿಗೆ ವಿನಾಯಿತಿ ನೀಡಿ ಆರ್ಥಿಕ ಇಲಾಖೆ ಆದೇಶ ಹೊರಡಿಸಿದೆ.
ಕರ್ನಾಟಕ ರಾಜ್ಯಾದ್ಯಂತ ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್ಗಳಲ್ಲಿ ಪ್ರದರ್ಶನ ಕಾಣುತ್ತಿರುವ ಚಾರ್ಲಿಗೆ ಜೂನ್ 19ರಿಂದ ಆರು ತಿಂಗಳವರೆಗೆ ತೆರಿಗೆ ವಿನಾಯಿತಿ ಘೋಷಿಸಲಾಗಿದೆ.
ತೆರಿಗೆ ವಿನಾಯಿತಿ ನೀಡುವಂತೆ ಸ್ವತಃ ರಕ್ಷಿತ್ ಶೆಟ್ಟಿಯವರೇ ಸರ್ಕಾರಕ್ಕೆ ಮನವಿ ಮಾಡಿದ್ದರು ಮತ್ತು ಸಿಎಂ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್ ಅಶೋಕ್, ಆರೋಗ್ಯ ಸಚಿವ ಸುಧಾಕರ್ ಹಾಗೂ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿಸೂರ್ಯರನ್ನು ಕರೆದುಕೊಂಡು ಹೋಗಿ ಚಾರ್ಲಿ ಸಿನಿಮಾ ತೋರಿಸಿದ್ದರು.
ನಾಯಿಗಳ ಆರೋಗ್ಯದ ಬಗ್ಗೆ ಮತ್ತು ಬೀದಿನಾಯಿಗಳ ದತ್ತು ಬಗ್ಗೆ ಸಿನಿಮಾದಲ್ಲಿ ಸಂದೇಶ ನೀಡಲಾಗಿದೆ ಎಂಬ ಕಾರಣ ನೀಡಿ ಸರ್ಕಾರ ರಕ್ಷಿತ್ ಶೆಟ್ಟಿ ಅವರ ಚಾರ್ಲಿ ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ.
ಸಿಎಂ ಬೊಮ್ಮಾಯಿ ಕಣ್ಣೀರು ಹಾಕಿದ್ದ ಸಿನಿಮಾಕ್ಕೆ ತೆರಿಗೆ ವಿನಾಯಿತಿ – ಸಿಎಂಗೆ ಸಿನಿಮಾ ತೋರಿಸಿ ತೆರಿಗೆ ವಿನಾಯಿ ಪಡೆದ ರಕ್ಷಿತ್ ಶೆಟ್ಟಿ..!