ಗುಜರಾತ್ನ ಅಲಹಾಬಾದ್ನಲ್ಲಿ ನಿರ್ಮಾಣ ಹಂತದ ಕಟ್ಟಡದ ಲಿಫ್ಟ್ ಪತನಗೊಂಡು (lift collapse) 7 ಮಂದಿ ಕಟ್ಟಡ ಕಾರ್ಮಿಕರು ಮೃತಪಟ್ಟಿದ್ಧಾರೆ. ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಬುಧವಾರ ಪೊಲೀಸರು ತಿಳಿಸಿದ್ದಾರೆ.
ಗುಜರಾತ್ ವಿಶ್ವವಿದ್ಯಾಲಯದ ಸಮೀಪ ಈ ನೂತನ ಕಟ್ಟಡ ನಿರ್ಮಾಣ ಮಾಡಲಾಗುತ್ತಿತ್ತು. ಕಾರ್ಮಿಕರನ್ನು ಕೊಂಡೊಯ್ಯುತ್ತಿದ್ದ ಲಿಫ್ಟ್ 7ನೇ ಅಂತಸ್ತಿನಿಂದ ಕೆಳಗೆ ಬಿದ್ದಿದೆ (lift collapse) ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
7 ಜನ ಮೃತರಾದ ಕಾರ್ಮಿಕರನ್ನು ಸಂಜಯ್ಬೈ ಬಾಬುಬೈ ನಾಯಕ್, ಜಗದೀಶ್ಬೈ ರಮೇಶ್ಬೈ ನಾಯಕ್, ಅಶ್ವಿನಿಬೈ ಸೋಮ್ಬೈ ನಾಯಕ್, ಮುಖೇಶ್ ಭರತ್ಬೈ ನಾಯಕ್, ಮುಖೇಶ್ಬೈ ಭರತ್ಬೈ ನಾಯಕ್, ರಾಜ್ಮಲ್ ಸುರೇಶ್ಬೈ ಕರಡಿ ಮತ್ತು ಪಂಕಜ್ಬೈ ಶಂಕರ್ಬೈ ಕರಡಿ ಎಂದು ಗುರುತಿಸಲಾಗಿದೆ.
ದುರ್ಘಟನೆಯಲ್ಲಿ 7 ಜನ ಕಾರ್ಮಿಕರು ಸಾವಿಗೀಡಾಗಿದ್ದಾರೆ ಎಂದು ಡಿಸಿಪಿ ಲವಿನಾ ಸಿನ್ಹಾ ಹೇಳಿದ್ದಾರೆ. ಇದನ್ನೂ ಓದಿ : ಪ್ರವಾಹ ಭೀತಿ: ಹೋಟೆಲ್ ಮಹಡಿಯಲ್ಲಿ ಸಿಲುಕಿದವರನ್ನು ಏರ್ ಲಿಫ್ಟ್ ಮಾಡಿ ರಕ್ಷಣೆ