ಗುಜರಾತ್ನ ಶಾಸಕ ಜಿಗ್ನೇಶ್ ಮೇವಾನಿಯವರಿಗೆ ಅಸ್ಸಾಂ ಹೈಕೋರ್ಟ್ ಇಂದು ಜಾಮೀನು ಮಂಜೂರು ಮಾಡಿದೆ.
ಮಹಿಳಾ ಪೊಲೀಸ್ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ ಹಾಗೂ ನಿಂದನೆಯ ಆರೋಪದಲ್ಲಿ ಅಸ್ಸಾಂನ ಬರ್ಪೇಟಾ ಪೊಲೀಸರು ಜಿಗ್ನೇಶ್ ಮೇವಾನಿಯವರನ್ನು ಬಂಧಿಸಿದ್ದರು.
ಟ್ವೀಟ್ ಮೂಲಕ ಪ್ರಧಾನಿ ನರೇಂದ್ರ ಮೋದಿಯವರನ್ನು ನಿಂದಿಸಿದ ಪ್ರಕರಣದಲ್ಲಿ ಅಸ್ಸಾಂನ ಪೊಲೀಸರು ಜಿಗ್ನೇಶ್ ಮೇವಾನಿಯವರನ್ನು ಗುಜರಾತ್ನಲ್ಲಿ ಬಂಧಿಸಿ ಅಸ್ಸಾಂಗೆ ಕರೆತಂದಿದ್ದರು. ಈ ಪ್ರಕರಣದಲ್ಲಿ ಜಾಮೀನು ಮಂಜೂರಾದ ಕೆಲವೇ ಗಂಟೆಗಳಲ್ಲಿ ಏ.25 ರಂದು ಬರ್ಪೇಟಾ ಪೊಲೀಸರು ಮರು ಬಂಧಿಸಿದ್ದರು.