ಗುಜರಾತ್ ರಾಜ್ಯದ ಮೊರ್ಬಿಯಲ್ಲಿ ಮಛ್ಛು ನದಿಗೆ ನಿರ್ಮಿಸಲಾಗಿದ್ದ ಕೇಬಲ್ ಬ್ರಿಡ್ಜ್ ಕುಸಿದ ಕಾರಣ 60 ಮಂದಿ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಳ ಆಗುವ ನಿರೀಕ್ಷೆ ಇದೆ.
ಈ ಕೇಬಲ್ ಬ್ರಿಡ್ಜ್ ಕುಸಿಯುವ ವೇಳೆ ಸೇತುವೆಯಲ್ಲಿ 400ಕ್ಕೂ ಅಧಿಕ ಮಂದಿ ಇದ್ದರು. ಸೇತುವೆ ಕುಸಿದ ಪರಿಣಾಮ 100 ಅಡಿ ಕೆಳಗಿರುವ ನದಿಗೆ ಬಿದ್ದಿದ್ದಾರೆ.
140 ವರ್ಷಗಳಷ್ಟು ಹಳೆಯದಾದ ಈ ಸೇತುವೆಯನ್ನು 2 ವರ್ಷ ಸಾರ್ವಜನಿಕರಿಗೆ ನಿರ್ಬಂಧಿಸಲಾಗಿತ್ತು.
https://twitter.com/vijaypatelMorbi/status/1586737659946618880?s=20&t=G36zTbd8DOZOw9Unw7Kbgw
ಕೆಲ ದಿನಗಳ ಹಿಂದೆಯಷ್ಟೇ ಸೇತುವೆಯನ್ನು ದುರಸ್ತಿ ಮಾಡಿದ ಬಳಿಕ ಮತ್ತೆ ಸಾರ್ವಜನಿಕರಿಗೆ ಮತ್ತೆ ಪ್ರವೇಶಕ್ಕೆ ಮುಕ್ತಗೊಳಿಸಲಾಗಿತ್ತು.
ಪ್ರಧಾನಿ ನರೇಂದ್ರ ಮೋದಿ ಅವರು ಇವತ್ತಿನಿಂದ ನವೆಂಬರ್ 1ರವರೆಗೆ ಗುಜರಾತ್ ಪ್ರವಾಸದಲ್ಲಿದ್ದಾರೆ.
NEW: Footage of the collapsed bridge in #India pic.twitter.com/LbGDO5ZQZ6
— i24NEWS English (@i24NEWS_EN) October 30, 2022