ಜಮ್ಮು-ಕಾಶ್ಮೀರದ (Jammu Kashmir) ಮಾಜಿ ಮುಖ್ಯಮಂತ್ರಿ ಮತ್ತು ಒಂದು ತಿಂಗಳ ಹಿಂದೆಯಷ್ಟೇ ಕಾಂಗ್ರೆಸ್ ತೊರೆದಿದ್ದ ಗುಲಾಂ ನಬಿ ಆಜಾದ್ (Gulam Nabi Azad) ತಮ್ಮದೇ ಹೊಸ ಪಕ್ಷ ಸ್ಥಾಪಿಸಿದ್ದಾರೆ.
ನಬಿ ಅವರ ಹೊಸ ಪಕ್ಷದ ಹೆಸರು ಡೆಮಾಕ್ರಾಟಿಕ್ ಆಜಾದ್ ಪಕ್ಷ (Democratic Azad Party). ತಮ್ಮ ಪಕ್ಷವನ್ನು ಹಿಂದೂಸ್ತಾನಿ ಪಕ್ಷ ಎಂದು ಆಜಾದ್ ಕರೆದುಕೊಂಡಿದ್ದಾರೆ. ಉರ್ದು ಮತ್ತು ಹಿಂದೂ ಮಿಶ್ರಿತ ಮಾತುಗಳನ್ನ ನಮ್ಮ ಮನೆಯಲ್ಲಿ ಮಾತಾಡ್ತಾರೆ, ಅದು ಹಿಂದೂಸ್ತಾನಿ ಎಂದು ನೆಹರು ಹೇಳುತ್ತಿದ್ದರು ಎಂದು ಆಜಾದ್ ಹೇಳಿದ್ದಾರೆ.
ಹೊಸ ಪಕ್ಷದ ಬಾವುಟವನ್ನೂ ಅನಾವರಣಗೊಳಿಸಿದ್ದಾರೆ. ಆ ಬಾವುಟದಲ್ಲಿ ಮೂರು ಬಣ್ಣಗಳಿವೆ, ಕಡುನೀಲಿ, ಬಿಳಿ ಮತ್ತು ಹಳದಿ.
ಆಜಾದ್ ಅವರ ಪ್ರಕಾರ ಅವರ ಪಕ್ಷದ ಧ್ವಜದಲ್ಲಿರುವ ಮೂರು ಬಣ್ಣಕ್ಕೂ ಒಂದೊಂದು ಅರ್ಥ ಇದೆ.
ಹಳದಿ ಬಣ್ಣ: ಕ್ರಿಯಾತ್ಮಕತೆ, ಯೋಚನಾಶೀಲತೆ ಮತ್ತು ವಿವಿಧತೆಯಲ್ಲಿ ಏಕತೆ.
ಬಿಳಿ ಬಣ್ಣ: ಶಾಂತಿ ಮತ್ತು ಸಹೋದರತ್ವ
ಕಡು ನೀಲಿ: ಮುಕ್ತತೆ ಮತ್ತು ಸಮುದ್ರದಷ್ಟು ಆಳಕ್ಕೆ ಮತ್ತು ಆಕಾಶದಷ್ಟು ಎತ್ತರಕ್ಕೆ ಆಲೋಚನಾ ಸ್ವಾತಂತ್ರ್ಯ ಮತ್ತು ಸಹಿಷ್ಣುತೆ.
ಜಮ್ಮು ಹಾಗೂ ಕಾಶ್ಮೀರದ ಜನರ ನಡುವೆ ಕಟ್ಟಲಾಗಿರುವ ತಡೆಗೋಡೆಯನ್ನು ಒಡೆದುಹಾಕಬೇಕು ಮತ್ತು ಪರಸ್ಪರ ಒಬ್ಬೊರಿಗೊಬ್ಬರು ಅವಲಂಬಿಗಳು ಎಂದು ಆಜಾದ್ ಹೇಳಿದ್ದಾರೆ.
ರಾಷ್ಟ್ರಪಿತ ಮಹಾತ್ಮ ಗಾಂಧಿ (Mahatma Gandhi) ಮತ್ತು ಜವಾಹರ್ಲಾಲ್ ನೆಹರು (Nehru) ಅವರ ಆಲೋಚನೆಗಳನ್ನು ಪಕ್ಷದಲ್ಲಿ ಅಳವಡಿಸಿಕೊಳ್ಳುವುದಾಗಿ ಆಜಾದ್ ಹೇಳಿದ್ದಾರೆ. ಜಮ್ಮು-ಕಾಶ್ಮೀರಕ್ಕೆ ಮತ್ತೆ ರಾಜ್ಯದ ಸ್ಥಾನಮಾನ ನೀಡುವುದು ಆಜಾದ್ ಪಕ್ಷದ ಚುನಾವಣಾ ವಿಷಯ ಆಗಬಹುದು, ಆದರೆ ರದ್ದಾಗಿರುವ ವಿಶೇಷ ಸ್ಥಾನಮಾನ ಮತ್ತೆ ಕೊಡಿಸುವಷ್ಟು ನಾನೀಗ ಶಕ್ತನಲ್ಲ ಎಂದು ಆಜಾದ್ ಹೇಳಿದ್ದಾರೆ.
ಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ಇವತ್ತು ಮತದಾನ ಆರಂಭವಾಗಿದೆ. ಉಪ ಚುನಾವಣೆ ಹಿನ್ನೆಲೆಯಲ್ಲಿ ಬೆಳಗ್ಗೆ 7 ಗಂಟೆಯಿAದಲೇ ಮತದಾನ ಆರಂಭವಾಗಿದೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿರುವ...
ನವೆಂಬರ್ 6ರಂದು ಅಂದರೆ ನಾಳೆ ಬುಧವಾರ ವಿಚಾರಣೆಗೆ ಹಾಜರಾಗುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮೈಸೂರು ಲೋಕಾಯುಕ್ತ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ...
ಮುಡಾ ಹಗರಣದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆ ಆದೇಶಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ನವೆಂಬರ್ 26ಕ್ಕೆ ಮುಂದೂಡಿದೆ. ಜೊತೆಗೆ ಮುಡಾ ಹಗರಣ...
ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಇದೇ ನವೆಂಬರ್ 9ರ ಬೆಳಗ್ಗೆ 6 ಗಂಟೆಯಿAದ ನವೆಂಬರ್ 11ರ ಬೆಳಗ್ಗೆ 6 ಗಂಟೆಯವರೆಗೆ ಪ್ರವಾಸಿಗರಿಗೆ...