ವಾರಾಣಸಿಯಲ್ಲಿರುವ ಗ್ಯಾನವಾಪಿ ಮಸೀದಿ ಮತ್ತು ಕಾಶಿ ವಿಶ್ವನಾಥ ಮಂದಿರದ ಆವರಣದಲ್ಲಿ ಅಳತೆ ಮುಂದುವರೆಸುವAತೆ ಸೂಚಿಸಿರುವ ವಾರಣಸಿ ನ್ಯಾಯಾಲಯ, ಸಮೀಕ್ಷೆಗೆ ನೇಮಕಗೊಂಡಿರುವ ಕೋರ್ಟ್ ಕಮಿಷನರ್ ಅವರನ್ನು ತೆಗೆದುಹಾಕಬೇಕೆಂಬ ಮನವಿಯನ್ನಿ ತಿರಸ್ಕರಿಸಿದೆ.
ಗ್ಯಾನವಾಪಿ ಮಸೀದಿ ಸಂಕೀರ್ಣ ಪಶ್ಚಿಮ ಗೋಡೆಯ ಹಿಂಭಾಗದಲ್ಲಿರುವ ಹಿಂದೂ ದೇವಾಲಯದಲ್ಲಿ ವರ್ಷವಿಡೀ ಪ್ರಾರ್ಥನೆಗೆ ಅವಕಾಶ ಕೊಡಬೇಕೆಂದು ಕೋರಿ ಹಿಂದೂ ಸಮುದಾಯದ ಐವರು ಮಹಿಳೆಯರು ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಮೇ 10ರೊಳಗೆ ಮಸೀದಿ ಸಂಕೀರ್ಣದ ಅಳತೆ ನಡೆಸಿ ವರದಿ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿತ್ತು. ಆದರೆ ಮಸೀದಿಯೊಳಗೆ ವೀಡಿಯೋ ಚಿತ್ರೀಕರಣಕ್ಕೆ ಮಸೀದಿ ಸಮಿತಿ ಆಕ್ಷೇಪಿಸಿದ್ದ ಹಿನ್ನೆಲೆಯಲ್ಲಿ ಅಳತೆ ಮುಂದುವರೆದಿರಲಿಲ್ಲ. ಅಳತೆ ಮತ್ತು ವೀಡಿಯೋ ಚಿತ್ರೀಕರಣ ವಿರೋಧಿಸಿ ಮಸೀದಿಯೊಳಗೆ ದೊಡ್ಡ ರಾದ್ಧಾಂತವೇ ಆಗಿತ್ತು.
ಕೋರ್ಟ್ ಕಮಿಷನರ್ ಅವರನ್ನು ತೆಗೆದುಹಾಕುವಂತೆ ಮಸೀದಿ ಸಮಿತಿ ಮಾಡಿಕೊಂಡಿದ್ದ ಮನವಿಯನ್ನೂ ನ್ಯಾಯಾಲಯ ತಿರಸ್ಕರಿಸಿದೆ. ಅಲ್ಲದೇ ಹಾಲಿ ಇರುವ ಕೋರ್ಟ್ ಕಮಿನಷರ್ ಅವರಿಗೆ ನೆರವಾಗಲು ಇನ್ನಿಬ್ಬರು ಕೋರ್ಟ್ ಕಮಿಷನರ್ಗಳನ್ನು ನೇಮಿಸಿದೆ.