ದೇಶಾದ್ಯಂತ ಬಿರುಗಾಳಿ ಎಬ್ಬಿಸಿದ್ದ ಗ್ಯಾನವಾಪಿ ಮಸೀದಿ ವಿವಾದದ (Gyanvapi Mosque Case) ವಿಚಾರಣೆ ಇಂದು ಮುಕ್ತಾಯಗೊಂಡಿದೆ. ಸೆಪ್ಟಂಬರ್ 12 ರಂದು ತೀರ್ಪು ಪ್ರಕಟಿಸಲಾಗುತ್ತದೆ ಎಂದು ತಿಳಿದುಬಂದಿದೆ.
ವಾರಣಾಶಿ ಜಿಲ್ಲಾ ನ್ಯಾಯಾಲಯ ಗ್ಯಾನವಾಪಿ ಮಸೀದಿ ವಿವಾದದ(Gyanvapi Mosque Case) ಬಗ್ಗೆ ವಿಚಾರಣೆ ನಡೆಸುತ್ತಿತ್ತು. ಇಂದು ಈ ವಿಚಾರಣೆಯನ್ನು ನ್ಯಾಯಾಲಯ ಮುಕ್ತಾಯಗಳಿಸಿದ್ದು, ತೀರ್ಪು ಕಾಯ್ದಿರಿಸಿದೆ.
ವಾರಣಾಸಿಯ ಗ್ಯಾನವಾಪಿ ಮಸೀದಿಯ ಗೋಡೆಗಳಲ್ಲಿ ಹಿಂದೂ ದೇವರ ಕುರುಹುಗಳಿವೆ. ಆದ್ದರಿಂದ ತಮಗೆ ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡಬೇಕು ಎಂದು ಐವರು ಮಹಿಳೆಯರು ಜಿಲ್ಲಾ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯ ಮಸೀದಿಯ ಸರ್ವೇಕ್ಷಣೆಗೆ ತಂಡ ಕಳುಹಿಸಿತ್ತು.
ಇದನ್ನೂ ಓದಿ : ಜ್ಯಾನವ್ಯಾಪಿ ಮಸೀದಿ ಪ್ರಕರಣ : ‘ಶಿವಲಿಂಗ’ ಪತ್ತೆಯಾದ ಸ್ಥಳದಲ್ಲಿ ನಿರ್ಬಂಧ ವಿಧಿಸಿದ ಕೋರ್ಟ್
ಸರ್ವೇ ಮಾಡಿದ ತಂಡಕ್ಕೆ ಮಸೀದಿಯ ಕೊಳದಲ್ಲಿ ಶಿವಲಿಂಗ ಪತ್ತೆಯಾಗಿತ್ತು. ಅಲ್ಲದೇ, 4 ರಿಂದ 5 ಹಿಂದೂ ದೇವರ ಕುರುಹುಗಳ ಪತ್ತೆಯಾಗಿದ್ದವು. ಈ ಬೆನ್ನಲ್ಲೇ, ಈ ಸುದ್ದಿ ರಾಷ್ಟ್ರಾದ್ಯಂತ ಹಲ್ ಚಲ್ ಎಬ್ಬಿಸಿತ್ತು.
ಮುಸ್ಲಿಂ ಕಮಿಟಿ ಜಿಲ್ಲಾ ನ್ಯಾಯಾಲಯದ ವಿಚಾರಣೆಗೆ ತಡೆಯೊಡ್ಡುವಂತೆ ಸುಪ್ರಿಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ್ದ ಸುಪ್ರಿಂಕೋರ್ಟ್ ಶಿವಲಿಂಗ ಪತ್ತೆಯಾದ ಕೊಳದ ಸ್ಥಳಕ್ಕೆ ಭದ್ರತೆ ನೀಡಬೇಕು. ಹಾಗಯೇ, ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ನಿರ್ಬಂಧ ವಿಧಿಸಬಾರದು ಎಂದು ಮಧ್ಯಂತರ ಆದೇಶ ನೀಡಿತ್ತು. ಜಿಲ್ಲಾ ನ್ಯಾಯಾಲಯ ವಿಚಾರಣೆಗೆ ಅನುಮತಿ ನೀಡಿ, ಈ ನ್ಯಾಯಾಲಯದ ತೀರ್ಪು ತನ್ನ ಅಧಿನಕ್ಕೆ ಒಳಪಟ್ಟಿದೆ ಎಂದು ಹೇಳಿತ್ತು.
ಇದೀಗ ವಾರಣಾಸಿ ಜಿಲ್ಲಾ ನ್ಯಾಯಾಲಯ ಗ್ಯಾನವಾಪಿ ಮಸೀದಿಯ ವಿಚಾರಣೆ ಮುಕ್ತಾಯಗೊಳಿಸಿದೆ. ಸೆಪ್ಟಂಬರ್ 12 ರಂದು ತೀರ್ಪು ನೀಡಲಿದ್ದು, ಇಡೀ ದೇಶದ ಚಿತ್ತ ವಾರಣಾಸಿಯತ್ತ ನಡೆದಿದೆ.
ಇದನ್ನೂ ಓದಿ : ಪ್ರತಿಯೊಂದು ಮಸೀದಿಯಲ್ಲಿ ಯಾಕೆ ಶಿವಲಿಂಗ ಹುಡುಕಬೇಕು..? – ಆರ್ಎಸ್ಎಸ್ ಮುಖ್ಯಸ್ಥ ಭಾಗವತ್ ಪ್ರಶ್ನೆ
(ಪ್ರತಿ ಮಸೀದಿಯಲ್ಲಿ ಶಿವಲಿಂಗ ಹುಡುಕುವ ಪ್ರಯತ್ನ ಬೇಡ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.)