ಉತ್ತರಪ್ರದೇಶದ ವಾರಾಣಸಿಯಲ್ಲಿರುವ ಗ್ಯಾನವಾಪಿ ಮಸೀದಿಯೊಳಗೆ ಕೈಗೊಳ್ಳಲಾಗಿರುವ ವೀಡಿಯೋ ಸಮೀಕ್ಷೆಯ ವರದಿ ಇನ್ನೂ ಅಂತಿಮವಾಗಿಲ್ಲ, ಕೋರ್ಟ್ನಿಂದ ಇನ್ನಷ್ಟು ಸಮಯ ಕೇಳಲಿದ್ದೇವೆ ಎಂದು ಸಮೀಕ್ಷೆಗೆ ನೇಮಿಸಿದ್ದ ಕಮಿಷನರ್ಗಳ ತಂಡ ಹೇಳಿದೆ.
ಮಂಗಳವಾರ ವರದಿ ಸಲ್ಲಿಸುವಂತೆ ಕೋರ್ಟ್ಗೆ ಕಮಿಷನ್ಗೆ ಸೂಚಿಸಿತ್ತು.
ಮಸೀದಿಯ ಕೊಳದಲ್ಲಿ ಶಿವಲಿಂಗ ಪತ್ತೆ ಆಗಿದೆ ಎಂದು ನಿನ್ನೆಯಷ್ಟೇ ಹಿಂದೂ ಭಕ್ತರ ಪರ ವಕೀಲರು ಹೇಳಿದ್ದರು ಮತ್ತು ಶಿವಲಿಂಗ ಪತ್ತೆ ಆಗಿದೆ ಎಂಬ ಸ್ಥಳವನ್ನು ಸೀಲ್ ಮಾಡಲು ಕೋರ್ಟ್ ಆದೇಶಿಸಿತ್ತು.
ಮೇ 14ರಿಂದ ಮೇ 16ರವರೆಗೆ ಬೆಳಗ್ಗೆ 8 ಗಂಟೆಯಿAದ 12 ಗಂಟೆಯವರೆಗೆ ಮಸೀದಿಯಲ್ಲಿ ಸಮೀಕ್ಷೆ ಮಾಡಲಾಗಿದ್ದು, ಅದರ ಚಿತ್ರೀಕರಣವನ್ನೂ ಮಾಡಲಾಗಿದೆ. ಆ ಸಮೀಕ್ಷೆ ವರದಿಯನ್ನು ಕೋರ್ಟ್ಗೆ ಸಲ್ಲಿಸಬೇಕಿದೆ. ಆದರೆ ವರದಿ ಸಿದ್ಧ ಆಗದೇ ಇರುವ ಹಿನ್ನೆಲೆಯಲ್ಲಿ ನಾವು ಇವತ್ತು ಕೋರ್ಟ್ಗೆ ವರದಿ ಸಲ್ಲಿಸುತ್ತಿಲ್ಲ. ನಾವು ಕೋರ್ಟ್ನಿಂದ ಹೆಚ್ಚುವರಿ ಸಮಯ ಕೇಳಲಿದ್ದೇವೆ, ಕೋರ್ಟ್ ಯಾವ ದಿನ ಹೇಳುತ್ತೋ ಆ ದಿನದೊಳಗೆ ವರದಿಯನ್ನು ಸಲ್ಲಿಸುತ್ತೇವೆ
ಎಂದು ಕಮೀಷನ್ ನಲ್ಲಿರುವ ವಕೀಲರು ಹೇಳಿದ್ದಾರೆ.