ಮಕ್ಕಳು ಶಾಲೆಗೆ ಬರುವುದು ಶೂ, ಸಾಕ್ಸ್ಗಳಲ್ಲ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ನೀಡಿರುವ ಬೇಜವಾಬ್ದಾರಿ ಮತ್ತು ಅವಿವೇಕಿತನದ ಹೇಳಿಕೆ ವಿರುದ್ಧ ಮಾಜಿ ಸಚಿವ ಹೆಚ್ ಸಿ ಮಹದೇವಪ್ಪ ಕಿಡಿಕಾರಿದ್ದಾರೆ.
ಶಾಲಾ ಮಕ್ಕಳ ಶೂ ಮತ್ತು ಸಾಕ್ಸ್ ಎಂಬುದು ಒಂದು ಸೌಲಭ್ಯಕ್ಕಿಂತ ಹೆಚ್ಚಾಗಿ ಗ್ರಾಮೀಣ ಲೋಕದ ಬಡ ಮಕ್ಕಳಲ್ಲಿ ಕಲಿಯುವ ಉತ್ಸಾಹವನ್ನು ಇಮ್ಮಡಿಗೊಳಿಸುವ ಮತ್ತು ಬಡತನದಲ್ಲಿ ಉಂಟು ಮಾಡುವ ಸಂತಸವಾಗಿರುತ್ತದೆ
ಎAದು ಮಹದೇವಪ್ಪ ಹೇಳಿದ್ದಾರೆ.
ಶಿಕ್ಷಣ ಸಚಿವರು ಜವಾಬ್ದಾರಿಯಿಂದ ಮಾತನಾಡುವುದನ್ನು ಕಲಿಯಬೇಕು.ತಮ್ಮ ದುರ್ಬಲತೆಯನ್ನು ಮುಚ್ಚಿಡಲು ಬಾಯಿಗೆ ಬಂದ ಹಾಗೆ ಮಾತನಾಡಬಾರದು. ಸಂವೇದನಾ ರಹಿತ ಸಚಿವರಿಗೆ ಇದು ಅರ್ಥವಾಗುತ್ತದೆ ಎಂದುಕೊಳ್ಳುವುದು ನಮ್ಮ ಮೂರ್ಖತನವೇ ಸರಿ’
ಮಾಜಿ ಸಚಿವ ಹೆಚ್ ಸಿ ಮಹದೇವಪ್ಪ ಕಿಡಿಕಾರಿದ್ದಾರೆ.