ADVERTISEMENT
ಅನಾರೋಗ್ಯದದಿಂದ ಇಂದು ರಾಜ್ಯಸಭೆ ಕಲಾಪದಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ ಎಂದು ರಾಜ್ಯಸಭೆ ಸದಸ್ಯರೂ ಆಗಿರುವ ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ.ದೇವೇಗೌಡರು ತಿಳಿಸಿದ್ದಾರೆ.
ಈ ಬಗ್ಗೆ ಇಂದು ರಾತ್ರಿ ತುರ್ತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು ಈ ಮಾಹಿತಿ ನೀಡಿದ್ದಾರೆ.
ಅಲ್ಲದೆ, ಬೆಂಗಳೂರಿನಲ್ಲಿ ಜೆಡಿಎಸ್ ಪಕ್ಷದ ಮಹತ್ವದ ಸಭೆಯನ್ನು ಇಂದೇ ಆಯೋಜಿಸಲಾಗಿತ್ತು. ಸೊಂಟದ ನೋವಿನ ಕಾರಣ ಆ ಸಭೆಯಲ್ಲೂ ಬಹಳ ಹೊತ್ತು ಕೂರಲು ತಮ್ಮಿಂದ ಆಗಲಿಲ್ಲ. ಹತ್ತು ನಿಮಿಷವಷ್ಟೇ ಆ ಸಭೆಗೆ ಹಾಜರಾಗಿ ನಂತರ ವೈದ್ಯರಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಸಾಗಿ ವಿಶ್ರಾಂತಿ ಪಡೆಯುತ್ತಿರುವುದಾಗಿ ಮಾಜಿ ಪ್ರಧಾನಿಗಳು ತಿಳಿಸಿದ್ದಾರೆ.
ನೋವು ಕಡಿಮೆಯಾದರೆ ಬುಧವಾರ ಕಲಾಪದಲ್ಲಿ ಭಾಗಿಯಾಗುವುದಾಗಿ ಮಾಜಿ ಪ್ರಧಾನಿಗಳು ತಿಳಿಸಿದ್ದಾರೆ.
ಮನೆಯಲ್ಲಿಯೇ ಕಲಾಪ ವೀಕ್ಷಣೆ:
ಇದರ ನಡುವೆ ಮಾಜಿ ಪ್ರಧಾನಿಗಳು ಮನೆಯಲ್ಲಿಯೇ ಟೀವಿಯಲ್ಲಿ ರಾಜ್ಯಸಭೆ ಕಲಾಪದ ನೇರ ಪ್ರಸಾರ ವೀಕ್ಷಿಸಿದರು.
ADVERTISEMENT