ಮಾಜಿ ಸಿಎಂ ಕುಮಾರಸ್ವಾಮಿಯವರು ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾಗುವ ಬಿಗ್ ಬುಲೆಟಿನ್ ಕಾರ್ಯಕ್ರಮದ ವಿರುದ್ಧ ಗುಡುಗಿದ್ದು, ಅಲ್ಲೆಲ್ಲೋ ಕಾರ್ಯಕ್ರಮದಲ್ಲಿ ಕುಳಿತು ರೈತರ ಬದುಕು ಸರಿ ಮಾಡೋಕೆ ಆಗುತ್ತಾ ಎಂದು ಪ್ರಶ್ನಿಸಿದ್ದಾರೆ.
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿಮಗೆ ಯೋಗ್ಯತೆ ಇದ್ರೆ ಬೆಲೆ ಏರಿಕೆ ಬಗ್ಗೆ ಪ್ರತಿಭಟನೆ ಮಾಡಿ. ಅದು ಬಿಟ್ಟು ಹಲಾಲ್, ಜಟ್ಕಾ ಇಂತಾ ವಿಚಾರಗಳಲ್ಲಿ ಹೋರಾಡ್ತೀರಾ? ಎಂದು ವಿಶ್ವ ಹಿಂದೂ ಪರಿಷತ್, ಯಾವ ಭಜರಂಗದಳ, ಯಾವ ಆರ್ ಎಸ್ ಎಸ್ ಸಂಗಟನೆಗಳ ವಿರುದ್ಧ ಹೆಚ್ಡಿಕೆ ಹಾರಿಹಾಯ್ದಿದ್ದಾರೆ.
ಇದೇ ವೇಳೆ ಪಬ್ಲಿಕ್ ಟಿವಿ ಮೇಲೆ ಗುಡುಗಿದ ಅವರು, ಅದ್ಯಾವುದೋ ಬಿಗ್ ಬುಲೆಟಿನ್ ಅಂತೆ. ಏನ್ ನೀವ್ ಒಬ್ರೇ ಏನ್ರೀ ದೇಶ ಕಟ್ಟೋದು. ನನ್ನ ಮೇಲೆ ಅನುಮಾನ ಪಡುವ ರೀತಿ ನ್ಯೂಸ್ ನಲ್ಲಿ ಮಾತಾಡ್ತೀರಾ. ನಿಮಗೇನ್ರೀ ರೈತರ ಬದುಕು ಗೊತ್ತಿದೆ. ಅಲ್ಲೆಲ್ಲೋ ಬಿಗ್ ಬುಲೆಟಿನ್ ನಲ್ಲಿ ಕುಳಿತು ರೈತರ ಬದುಕು ಸರಿ ಮಾಡೋಕೆ ಆಗುತ್ತಾ?. ಕುಮಾರಸ್ವಾಮಿ ಎತ್ತಿ ಕಟ್ತಾ ಇದಾರೆ ಆಂತೀರಾ, ನನ್ನ ಪ್ರಶ್ನೆ ಮಾಡ್ತೀರಾ?.. ನಿಮ್ಮ ಯೋಗ್ಯತೆ ಗೆ ಬಿಗ್ ಬುಲೆಟಿನ್ ನಲ್ಲಿ ಬೆಲೆ ಏರಿಕೆ ಬಗ್ಗೆ ಮಾತಾಡ್ರೀ ಎಂದು ಹರಿಹಾಯ್ದಿದ್ದಾರೆ.