* ಎಲ್ಲರನ್ನು ಪ್ರೀತಿಸಿ.. (Love) ದ್ವೇಷ.. ಪ್ರತಿಕಾರ ಬೇಡ(Don’t Hate)
* ಗತಂ ಗತಃ.. ಹಿಂದೆ ಏನಾಗಿದೆ ಎಂಬುದರ ಚಿಂತೆ ಬೇಡ
* ಭವಿಷ್ಯದ ಮೇಲೆ ದೃಷ್ಟಿ ಹರಿಸಿ.. ಮನಶಕ್ತಿ ವೃದ್ಧಿಸಿ
* ಸಮಯ ಯಾರಿಗಾಗಿಯೂ ಕಾಯುವುದಿಲ್ಲ.. ಪ್ರತಿಕ್ಷಣವೂ ಆನಂದಿಸಿ
* ಸಣ್ಣ ಪುಟ್ಟ ವಿಚಾರಗಳಲ್ಲೂ ಸಂತೋಷವಿರುತ್ತದೆ.. ಸೆಲೆಬ್ರೇಟ್ ಮಾಡಿ.
* ಓಡು ನಡಿಗೆಯ ಜೀವನದಲ್ಲಿ ಯಂತ್ರವಾಗಬೇಡಿ
* ಜೀವನದಲ್ಲಿ ಗುರಿ ಎಂಬುದು ಮುಖ್ಯ. ಆದರೆ, ಗುರಿಗಾಗಿ ಜೀವನವನ್ನು, ಖುಷಿಯನ್ನು ಮಿಸ್ ಮಾಡ್ಕೋಬೇಡಿ
* ಕಷ್ಟಗಳ ಜೊತೆ ಖುಷಿಗಳು ಇದ್ದಲ್ಲಿ ಮಾತ್ರ ಜೀವನ ಪರಿಪೂರ್ಣ
* ದೊಡ್ಡ ದೊಡ್ಡ ಭವನ, ಕಾರು ಇದ್ದಲ್ಲಿ ಮಾತ್ರ ಖುಷಿ ಇರುತ್ತೆ ಎಂದಲ್ಲ
* ನಿಮ್ಮ ಮನಸ್ಸಿಗೆ ಇಷ್ಟವಾದ ಕೆಲಸ.. ನಿಮಗೆ ಖುಷಿ ಕೊಡುತ್ತದೆ..
* ಉನ್ನತ ಶಿಕ್ಷಣ, ಉನ್ನತ ಹುದ್ದೆಗಳಲ್ಲಿ ಖುಷಿ ಇದೆ ಎಂಬ ಭ್ರಮೆ ಬೇಡ..
* ನೀವು ನೆಮ್ಮದಿ ಆಗಿದ್ದಲ್ಲಿ ಮಾತ್ರ ನೀವು ಸಂತೋಷವಾಗಿದ್ದೀರ ಎಂದರ್ಥ
* ಅದಿಲ್ಲ.. ಇದಿಲ್ಲ ಎಂದು ಕೊರಗಬೇಡಿ.. ಇರುವುದರಲ್ಲೇ ತೃಪ್ತಿಯನ್ನು ಕಾಣಿರಿ
* ಅಡ್ಡದಾರಿಯಲ್ಲಿ ಯಾವುದನ್ನು ದಕ್ಕಿಸಿಕೊಳ್ಳಲು ಪ್ರಯತ್ನಿಸಬೇಡಿ
* ಧ್ಯಾನದಿಂದ (Meditation)ಆಧ್ಯಾತ್ಮಿಕ ನೆಮ್ಮದಿ ಮಾತ್ರವಲ್ಲ ಆರೋಗ್ಯವನ್ನು ನೀಡುತ್ತದೆ.
* ಧ್ಯಾನದಿಂದ ಮನಸ್ಸು ನಿರ್ಮಲವಾಗಿ ಆನಂದ ಭಾವ ಮೂಡಿಸುತ್ತದೆ.