ADVERTISEMENT
ADVERTISEMENT
ಎರಡು ವರ್ಷದಿಂದ ಖಾಲಿ ಇರುವ ಅಥವಾ ಭರ್ತಿ ಆಗದೇ ಇರುವ ರಾಜ್ಯ ಸರ್ಕಾರದ ಎಲ್ಲ ಹುದ್ದೆಗಳನ್ನು ರದ್ದುಪಡಿಸಿ ಹರಿಯಾಣದ ಬಿಜೆಪಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ಈ ಸಂಬಂಧ ಹರಿಯಾಣ ಸರ್ಕಾರದ ಹಣಕಾಸು ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದಾರೆ.
ಆರ್ಥಿಕ ಸುಧಾರಣಾ ಕ್ರಮದ ಭಾಗವಾಗಿ ಎಲ್ಲ ಸರ್ಕಾರಿ ಇಲಾಖೆಗಳ ಕಾರ್ಯದರ್ಶಿಗಳು, ಇಲಾಖಾ ಮುಖ್ಯಸ್ಥರು, ನಿಗಮಗಳು ಮತ್ತು ಮಂಡಳಿಗಳ ವ್ಯವಸ್ಥಾಪಕ ನಿರ್ದೇಶಕರು, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ರಿಜಿಸ್ಟ್ರಾರ್, ಎಲ್ಲ ಪ್ರಾದೇಶಿಕ ಆಯುಕ್ತರು, ರಾಜ್ಯದ ಎಲ್ಲ ವಿವಿಗಳ ಕುಲಪತಿಗಳು ಮತ್ತು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಹರಿಯಾಣ ಸರ್ಕಾರದ ಹಣಕಾಸು ಇಲಾಖೆ ಸುತ್ತೋಲೆ ರವಾನಿಸಿದೆ.
ಎರಡು ವರ್ಷದಿಂದ ಖಾಲಿ ಇರುವ ಅಥವಾ ಭರ್ತಿ ಆಗದೇ ಇರುವ ಅಥವಾ ಹೊಸದಾಗಿ ಸೃಷ್ಟಿ ಆಗಿ ಭರ್ತಿ ಆಗದೇ ಇರುವ ಹುದ್ದೆಗಳನ್ನು ರದ್ದುಪಡಿಸಲಾಗಿದೆ. ಈ ಸಂಬಂಧ ಇನ್ನೊಂದು ತಿಂಗಳಲ್ಲಿ ಪ್ರತ್ಯೇಕವಾಗಿ ಇಲಾಖೆಗಳೇ ಆದೇಶವನ್ನು ಹೊರಡಿಸಲಿವೆ.
ಒಂದು ವೇಳೆ ಹೊಸ ಹುದ್ದೆಯ ಸೃಷ್ಟಿ ಬೇಕು ಎಂದಾದಲ್ಲಿ ಹೊಸ ಹುದ್ದೆಯ ಸಮರ್ಥನೆಗೆ ವಿವರಗಳೊಂದಿಗೆ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಬೇಕಾಗುತ್ತದೆ