ಹಾಸನ ನಗರಸಭೆ ಸದಸ್ಯ ಮತ್ತು ಜೆಡಿಎಸ್ ಮುಖಂಡ ಪ್ರಶಾಂತ್ ನಾಗರಾಜ್ ಹತ್ಯೆಗೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಪೊಲೀಸರು ಆಕ್ರೋಶ ಹೊರಹಾಕಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಮಾತಾಡಿದ ಪ್ರಜ್ವಲ್ ರೇವಣ್ಣ,
`ಕೆಂಚಟಹಳ್ಳಿ ಬಳಿ ಟ್ರಕ್ ಟರ್ಮಿನಲ್ ಜಾಗದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಹೇಳ್ತಾರೆ ಕಲ್ಲು ಬೀಳಲಿ, ಐದು ಜನರನ್ನು ಶೂಟ್ ಮಾಡಿ ಹೋಗ್ತೀನಿ ಅಂತ. ಸಂಸದರ ಮುಂದೆ ನೇರವಾಗಿ ಈ ರೀತಿ ಅಧಿಕಾರಿ ಹೇಳಿಕೆ ಕೊಡಬಹುದಾ..?
ಒಂದೂವರೆ ವರ್ಷದ ಹಿಂದೆ ನಡೆದ ಘಟನೆಯನ್ನು ಪುನರ್ ಹೇಳಿಕೆ ತೆಗೆದುಕೊಂಡು ಕೇಸ್ ಹಾಕಿದ್ದಾರೆ. ಪಕ್ಷ ಸೇರುವಂತೆ ಬೆದರಿಕೆ ಹಾಕುತ್ತಿದ್ದರು. ಪಕ್ಷ ಸೇರದ್ದಕ್ಕೆ ಕೊಟ್ಟ ಬಹುಮಾನ ಇದೇನಾ..? ಇವತ್ತು ಇವನಿಗೆ ಆಗಿದೆ, ನಾಳೆ ಇನ್ನೊಬ್ಬನಿಗೆ ಆಗಬಹುದು. ಯಾರ ಕುಮ್ಮಕಿದ್ಯೋ ಸಂಪೂರ್ಣ ತನಿಖೆ ಆಗ್ಬೇಕು’ ಎಂದು ಸರ್ಕಲ್ ಇನ್ಸ್ಪೆಕ್ಟರ್ ರೇಣುಕಾ ಪ್ರಸಾದ್ ವಿರುದ್ಧ ಕಿಡಿಕಾರಿದರು.
`ಹಾಸನ ತಾಲೂಕಿನಲ್ಲಿ ಮಟ್ಕಾ ದಂಧೆ ನಡೆಯುತ್ತಿದೆ’ ಎಂದೂ ಪ್ರಜ್ವಲ್ ರೇವಣ್ಣ ಆರೋಪಿಸಿದರು.