ADVERTISEMENT
ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಅಂತ್ಯಕ್ರಿಯೆಯಲ್ಲೂ ಮಾಜಿ ಮುಖ್ಯಮಂತ್ರಿಯೂ ಆಗಿರುವ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಸಣ್ಣತನ ಪ್ರದರ್ಶಿಸಿದ್ದಾರೆ.
ಕೃಷ್ಣ ತವರೂರು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ ಇವತ್ತು ಸಕಲ ಸರ್ಕಾರಿ ಗೌರವದೊಂದಿಗೆ ಎಸ್ ಎಂ ಕೃಷ್ಣ ಅವರ ಅಂತ್ಯಕ್ರಿಯೆ ನಡೆಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಒಳಗೊಂಡಂತೆ ರಾಜಕೀಯ ಪ್ರಮುಖರು ಭಾಗವಹಿಸಿ ಅಂತಿಮ ನಮನ ಸಲ್ಲಿಸಿದರು.
ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅಕ್ಕ-ಪಕ್ಕ ಕೂತಿದ್ದರು. ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಕುಮಾರಸ್ವಾಮಿ ಬರುವ ವೇಳೆ ಯಡಿಯೂರಪ್ಪ ಅವರು ಹಸ್ತಲಾಘವ ಮಾಡುವ ಸಲುವಾಗಿ ಕುಮಾರಸ್ವಾಮಿಯತ್ತ ಕೈ ಚಾಚಿದರು.
ಆದರೆ ಯಡಿಯೂರಪ್ಪ ಅವರನ್ನು ನೋಡಿದರೂ ನೋಡದಂತೆ ಕೈ ಕುಲುಕದೇ ಮುಂದೆ ಹೋಗಿಯೇ ಬಿಟ್ಟರು ಕುಮಾರಸ್ವಾಮಿ. ಯಡಿಯೂರಪ್ಪಗೆ ಹಸ್ತಲಾಘವ ಮಾಡಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯಗೂ ಹಸ್ತಲಾಘವ ಮಾಡ್ಬೇಕಾಗುತ್ತದೆ, ಇಲ್ಲವಾದರೆ ಟೀಕೆಗೆ ಒಳಗಾಗ್ತೇನೆ ಎಂಬ ಲೆಕ್ಕಾಚಾರದಲ್ಲಿ ಕುಮಾರಸ್ವಾಮಿ ಮುಂದೆ ಸಾಗಿದರು.
ಅಂತ್ಯಕ್ರಿಯೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಾಯಕರು ಪಕ್ಷ ಬೇಧ ಮರೆತು ಒಂದಾಗಿ ಸಂತಾಪ ಸೂಚಿಸಿದರೆ ಕುಮಾರಸ್ವಾಮಿ ಪ್ರದರ್ಶಿಸಿದ ಸಣ್ಣತನ ಟೀಕೆಗೆ ಗುರಿಯಾಗಿದೆ.
https://x.com/ShwethaKiru/status/1866839610002980987
ADVERTISEMENT