ಕರ್ತವ್ಯದಲ್ಲಿ ಹೆಡ್ ಕಾನ್ಸ್ಸ್ಟೇಬಲ್ವೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರ ಕೊಣಾಜೆ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಸ್ಟೇಬಲ್ ಜಗನ್ನಾಥ ಸಾವನ್ನಪ್ಪಿದ್ದಾರೆ.
44 ವರ್ಷದ ಜಗನ್ನಾಥ ಅವರು 2000ರಲ್ಲಿ ಪೊಲೀಸ್ ಸೇವೆಗೆ ಸೇರ್ಪಡೆ ಆಗಿದ್ದರು.
ಇವತ್ತು ಕರ್ತವ್ಯದಲ್ಲಿದ್ದಾಗ ಇದ್ದಕಿದ್ದಂತೆ ಅಸ್ವಸ್ಥಗೊಂಡ ಜಗನ್ನಾಥ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅವರ ಪ್ರಾಣ ಉಳಿಸಿಕೊಳ್ಳಲು ಆಗಲಿಲ್ಲ.
ಪುತ್ತೂರು ತಾಲೂಕಿನ ಸವಣೂರು ಮೂಲದ ಇವರು ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ADVERTISEMENT
ADVERTISEMENT