40 ದಾಟಿದ ಮಹಿಳೆಯರೇ ನಿಮ್ಮ ಆಹಾರದ ಬಗ್ಗೆ ಪ್ರತ್ಯೇಕ ಶ್ರದ್ಧೆ ವಹಿಸಿ.. ಒಳ್ಳೆಯ ಆಹಾರದಿಂದಲೇ ನಂತರ ಬರುವ ಆರೋಗ್ಯ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಬಹುದು..
– ಶಾರೀರಿಕ ಬದಲಾವಣೆಗಳನ್ನು ತಾಳಿಕೊಳ್ಳಲು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಮತೋಲನದ ಆಹಾರ ಸೇವಿಸಬೇಕು.. ಹಾಲು, ಮೊಸರು, ಬೇಳೆಕಾಳುಗಳನ್ನು ಹೆಚ್ಚಾಗಿ ತೆಗೆದುಕೊಳ್ಳಬೇಕು..
– ನಿಂಬೆ ಜಾತಿಯ ಹಣ್ಣುಗಳನ್ನು ನಿತ್ಯವೂ ತಿನ್ನಬೇಕು.. ಸಿ ವಿಟಮಿನ್ ಇರುವ ಈ ಹಣ್ಣುಗಳನ್ನು ಆರೋಗ್ಯ ಆಧರಿಸಿರುತ್ತದೆ. ಮೂಳೆಗಳಿಗೆ ಹೆಚ್ಚಿನ ಶಕ್ತಿ ಸಿಗುತ್ತದೆ.
– ನಿತ್ಯವೂ ನಿಮ್ಮ ಆಹಾರದಲ್ಲಿ ಒಂದು ಮೊಟ್ಟೆಯನ್ನು ತೆಗೆದುಕೊಳ್ಳಿ. ಇದರಿಂದ ಮೆನೋಪಾಜ್ನಲ್ಲಿ ಬರುವ ಸಮಸ್ಯೆಗಳಿಂದ ಪಾರಾಗುವ ಅವಕಾಶವಿದೆ. ಕೆಟ್ಟ ಕೊಬ್ಬನ್ನು ಇಳಿಸುತ್ತದೆ.
– ಒಳ್ಳೆಯ ಕೊಬ್ಬಿನಾಂಶ ನೀಡುವ ಮೀನು ಮಾಂಸವನ್ನು ಆಗಾಗ ತೆಗೆದುಕೊಳ್ಳಬೇಕು. ಇವುಗಳಿಂದ ಒಮೆಗಾ-3 ಕೊಬ್ಬಿನಾಂಶ ಸಿಗುತ್ತದೆ. ನಿದ್ರಾಹೀನತೆಯನ್ನು ಇದು ನಿವಾರಣೆ ಮಾಡುತ್ತದೆ.
– ಮಿಲ್ಲೆಟ್ಗಳಿಂದ ಆರೋಗುಕ್ಕೆ ಬೇಕಾದ ಎಲ್ಲ ರೀತಿಯ ಪ್ರೋಟೀನ್, ವಿಟಮಿನ್ ಸಿಗುತ್ತವೆ. ಇವುಗಳನ್ನು ಉಪಯೋಗಿಸುವುದರಿಂದ ಮಾನಸಿಕ ಒತ್ತಡ, ಕಳವಳ ಕಡಿಮೆ ಆಗುತ್ತದೆ.
– ಕ್ಯಾರೆಟ್ ಅನ್ನು ಅಡುಗೆಯಲ್ಲಿ ಬಳಸುವುದರಿಂದ… ಜ್ಯೂಸ್ ಮಾಡಿಕೊಂಡು ಕುಡಿಯುವುದರಿಂದ ಎ ವಿಟಮಿನ್ ಲಭಿಸುತ್ತದೆ. ಮುಖ್ಯವಾಗಿ ಮುಖದ ಮೇಲೆ ಕರಿಮಚ್ಚೆ, ಚರ್ಮ ಸುಕ್ಕುಗಟ್ಟುವುದು ಕಡಿಮೆ ಆಗುತ್ತದೆ. ಕಣ್ಣಿನ ಆರೋಗ್ಯ ಚನ್ನಾಗಿರುತ್ತದೆ.
– ಸೇಬು ತಿನ್ನುವುದರಿಂದ ವಿಟಮಿನ್ ಸಿ,ಕೆ,ಬಿ ಜೊತೆಗೆ ಫೈಬರ್, ಆಂಟಿ ಆಕ್ಸಿಡೆಂಟ್ಸ್ ಹೇರಳವಾಗಿ ಸಿಗುತ್ತವೆ ಜೀರ್ಣಕ್ರಿಯೆ ಚನ್ನಾಗಿರುತ್ತದೆ.