# ಇಯರ್ ಫೋನ್ ಹೆಚ್ಚಾಗಿ ಬಳಸಬೇಡಿ… ಕಿವಿಯಲ್ಲಿ ಬ್ಯಾಕ್ಟಿರಿಯಾ ಸೇರಿಕೊಂಡು ಸಮಸ್ಯೆ ಉಂಟಾಗಬಹುದು.
# ಇಯರ್ ಫೋನ್ ನಲ್ಲಿ ಫುಲ್ ವಾಲ್ಯೂಮ್ ಕೊಟ್ಕೊಂಡು ಹಾಡು ಕೇಳುವುದು ಒಳ್ಳೆಯದಲ್ಲ. ಇದರಿಂದ ಕಿವಿಗಳಿಗೆ ಹಾನಿಯಾಗಬಹುದು.
# ಇಯರ್ ಫೋನ್ ಬಡ್ಸ್ ನಿಮ್ಮ ಕಿವಿಗೆ ಸರಿಯಾಗಿ ಹೊಂದುತ್ತವಯೇ ಗಮನಿಸಿಕೊಳ್ಳಿ. ಬಲವಂತವಾಗಿ ಬಡ್ಸ್ ಕಿವಿಗೆ ಇಟ್ಟುಕೊಳ್ಳುವುದರಿಂದ ಚರ್ಮ ಸಮಸ್ಯೆ ಉಂಟಾಗಬಹುದು. ಇನ್ಫೆಕ್ಷನ್ ಕೂಡ ಆಗುವ ಸಾಧ್ಯತೆ ಇರುತ್ತದೆ.
# ಇಯರ್ ಫೋನ್ ಗಳಿಗೆ ಇರುವ ರಬ್ಬರ್ ಟಿಪ್ಸ್ ಗಳನ್ನು ಆಗಾಗ ಬದಲಿಸಿ. ಇಲ್ಲವೇ ಅದನ್ನು ಸೋಪ್ ನೀರಿನಿಂದ ತೊಳೆದು ಉಪಯೋಗಿಸಿ.
# ಮನೆಯಲ್ಲಿ ಇರುವಾಗ ಅಥವಾ ಒಂಟಿಯಾಗಿ ಇದ್ದಾಗ ಕಾಲ್ / ಹಾಡುಗಳಿಗಾಗಿ ಹೆಡ್ ಫೋನ್ / ಇಯರ್ ಫೋನ್ ಬಳಸದೇ ಸ್ಪೀಕರ್ ಆನ್ ಮಾಡಿಕೊಳ್ಳಿ.
# ಒಬ್ಬರು ಬಳಸುವ ಇಯರ್ ಫೋನ್ ಮತ್ತೊಬ್ಬರು ಬಳಸುವುದು ಒಳ್ಳೆಯದಲ್ಲ. ಒಂದೊಮ್ಮೆ ಬಳಸಿದರೂ ಅದನ್ನು ಶುಭ್ರ ಮಾಡಿಯೇ ಉಪಯೋಗಿಸಿ.
# ಸದ್ಯ ಎಲ್ಲರೂ ಹೆಚ್ಚಾಗಿ ಬ್ಲೂ ಟೂತ್ ನಿಂದ ಕೆಲಸ ಮಾಡುವ ಹೆಡ್ ಫೋನ್ ಹೆಚ್ಚಾಗಿ ಬಳಸುತ್ತಾರೆ. ಅವು ಯಾವಾಗಲೂ ಕೊರಳಿನಲ್ಲಿ ಇರುತ್ತವೆ. ಹೀಗಾಗಿ ಧೂಳು ಬೀಳುತ್ತದೆ. ಹೀಗಾಗಿ ಆಗಾಗ ಹೆಡ್ ಫೋನ್ ಗಳನ್ನು ಬಿಳಿ ವೈಪ್ಸ್ ಬಳಸಿ ಸ್ವಚ್ಛ ಮಾಡಿಕೊಳ್ಳಿ.
# ಮನೆಗೆ ಬಂದ ಕೂಡಲೇ ಹೆಡ್ ಫೋನ್ / ಇಯರ್ ಫೋನ್ ಗಳನ್ನು ಎಲ್ಲೆಂದರಲ್ಲಿ ಹಾಕಬೇಡಿ. ಅದಕ್ಕೆ ಎಂದು ಇರುವ ಪೌಚ್/ ಬಾಕ್ಸ್ ನಲ್ಲಿ ಹಾಕಿ ಇಡುವುದು ಒಳ್ಳೆಯದು