ಅಸ್ಸಾಂನಲ್ಲಿ ಭೀಕರ ಪ್ರವಾಹ ಉಂಟಾಗಿದೆ. ಈ ಪ್ರವಾಹಕ್ಕೆ ಅಸ್ಸಾಂನ 25 ಲಕ್ಷ ಜನ ಸಂಕಷ್ಟಕ್ಕೀಡಾಗಿದ್ದಾರೆ. ಭೀಕರ ಪ್ರವಾಹದಲ್ಲಿ ಆಸ್ತಿ ಪಾಸ್ತಿ ಹಾಗೂ ಜೀವ ಹಾನಿಯಾಗದಂತೆ ತಡೆಯಲು ಅಲ್ಲಿನ ಸರ್ಕಾರ ಕಾರ್ಯನಿರ್ವಹಿಸುತ್ತಿದೆ.
ಬಾಲಿವುಡ್ ನಟ ಅಮೀರ್ ಖಾನ್ ಅವರು ಅಸ್ಸಾಣ ಜನತೆಗೆ ಕೈ ಚಾಚಿದ್ದಾರೆ. ಅಮೀರ್ ಖಾನ್ ಅಸ್ಸಾಂ ಮುಖ್ಯಮಂತ್ರಿ ಪರಿಹಾರ ನಿಧಿಗೆ 25 ಲಕ್ಷ ರೂ ಧನಸಹಾಯ ಮಾಡಿದ್ದಾರೆ.
ಬಾಲಿವುಡ್ ನಟ ಅಮೀರ್ ಖಾನ್ ಅವರು ಸಿಎಂ ಪರಿಹಾರ ನಿಧಿಗೆ 25 ಲಕ್ಷ ರೂ. ಕೊಡುಗೆ ನೀಡುವ ಮೂಲಕ ನಮ್ಮ ರಾಜ್ಯದ ಪ್ರವಾಹ ಪೀಡಿತ ಜನರಿಗೆ ಸಹಾಯ ಹಸ್ತ ಚಾಚಿದ್ದಾರೆ. ಅವರ ಕಾಳಜಿ ಮತ್ತು ಉದಾರತೆಯ ಕಾರ್ಯಕ್ಕೆ ನನ್ನ ಪ್ರಾಮಾಣಿಕ ಕೃತಜ್ಞತೆಗಳು ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಟ್ವೀಟ್ ಮಾಡಿದ್ದಾರೆ.
ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎಎಸ್ಡಿಎಂಎ) ಇತ್ತೀಚಿನ ಅಂಕಿ–ಅಂಶಗಳ ಪ್ರಕಾರ, ರಾಜ್ಯದ 27 ಜಿಲ್ಲೆಗಳು ಪ್ರವಾಹಪೀಡಿತವಾಗಿದ್ದು, 25 ಲಕ್ಷಕ್ಕೂ ಹೆಚ್ಚು ಜನರು ಸಂಕಷ್ಟಕ್ಕೀಡಾಗಿದ್ದಾರೆ. ಎರಡು ವಾರಗಳಿಂದ ಪ್ರವಾಹ ಮತ್ತು ಭೂಕುಸಿತದ ಪರಿಣಾಮವಾಗಿ 555 ಪರಿಹಾರ ಶಿಬಿರಗಳಲ್ಲಿ 1.76 ಲಕ್ಷ ಮಂದಿ ಆಶ್ರಯ ಪಡೆದಿದ್ದಾರೆ ಎಂದು ಹೇಳಲಾಗಿದೆ.
ಅಸ್ಸಾಂನಲ್ಲಿ ಪ್ರವಾಹ ಮತ್ತು ಭೂಕುಸಿತದಿಂದಾಗಿ ಈ ವರ್ಷದ ಸಾವಿಗೀಡಾದವರ ಸಂಖ್ಯೆ 139ಕ್ಕೆ ಏರಿಕೆಯಾಗಿದೆ. ಅಮೀರ್ ಖಾನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಲಾಲ್ ಸಿಂಗ್ ಚಡ್ಡಾ’ ಬಿಡುಗಡೆಗೆ ಸಜ್ಜಾಗಿದೆ.
ಇನ್ನು, ಮಹಾರಾಷ್ಟ್ರದ ಶಿವಸೇನೆಯ ಭಿನ್ನಮತೀಯ ಶಾಸಕರು ಅಸ್ಸಾಂ ರಾಜಧಾನಿ ಗುಹಾವಟಿಯ ಹೋಟೆಲೊಂದರಲ್ಲಿ ಉಳಿದುಕೊಂಡಿದ್ದರು. ಇದೀಗ, ಗೋವಾಗೆ ಪ್ರಯಾಣಿಸುತ್ತಿರುವ ಅವರು ಅಸ್ಸಾಂ ನ ಪ್ರವಾಹಕ್ಕೆ ಸ್ಪಂದಿಸಿ ಮುಖ್ಯಮಂತ್ರಿ ಪರಿಹಾರ ನಿಧಿಗೆ 51 ಲಕ್ಷ ಘೋಷಣೆ ಮಾಡಿದ್ದಾರೆ.
Heartfelt gratitude to Hon’ble Shiv Sena MLAs led by Shri @mieknathshinde ji for contributing ₹51 lakh to CM Relief Fund.
The contribution shall go a long way in reaching out to the flood victims and ensuring relief in flood-affected areas of our State.
— Himanta Biswa Sarma (Modi Ka Parivar) (@himantabiswa) June 29, 2022