ಹೆಸ್ಕಾಂನ (Hescom) ಅಥಣಿ ಶಾಖೆ ಕಚೇರಿ ಆವರಣದಲ್ಲಿ ಇಂದು ಸೋಮವಾರ ಗುತ್ತಿಗೆ ನೌಕರರೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹೆಸ್ಕಾಂನ (Hescom) ಅಥಣಿ ಶಾಖೆಯ ನೌಕರ ಮಂಜುನಾಥ ಗಂಗಪ್ಪ ಮುತ್ತಗಿ (30) ಸಾವಿಗೆ ಶರಣಾದ ವ್ಯಕ್ತಿ. ವಿದ್ಯುತ್ ಕಂಬಗಳಿಗೆ ನಿಲ್ಲಿಸುವ ಹೈದರ್ಗೆ ಹಗ್ಗ ಹಾಕಿ ನೇಣು ಹಾಕಿಕೊಂಡಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಅಥಣಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇದನ್ನೂ ಓದಿ : ಮಧುಗಿರಿ : ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಆತ್ಮಹತ್ಯೆ