`ವರಿಷ್ಠರಿಗೆ ಎಲ್ಲವೂ ಗೊತ್ತಿದೆ, ನಾನೂ ಅವರಿಗೆ ಹೇಳಿದ್ದೇನೆ’ ಎಂದು ಬಿಜೆಪಿ ಕಾರ್ಯಕರ್ತ ಮತ್ತು ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಈಶ್ವರಪ್ಪ ರಾಜೀನಾಮೆ ಪಡೆಯುವ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.
ಮಂಗಳೂರಲ್ಲಿ ಮಾತಾಡಿದ ಅವರು,
ಸಚಿವ ಈಶ್ವರಪ್ಪ ವಿರುದ್ದ ಎಫ್ ಐಆರ್ ಆಗಿದೆ. ಎಲ್ಲಾ ವಿವರ ಪಡೆದುಕೊಂಡಿದ್ದೇನೆ. ಈ ಬಗ್ಗೆ ಈಶ್ವರಪ್ಪನವರ ಹತ್ತಿರ ಮಾತನಾಡ್ತೇನೆ, ಫೋನಲ್ಲೂ ಕೆಲವು ವಿಚಾರ ಮಾತನಾಡಿದ್ದೇನೆ. ಅವರನ್ನ ಕರೆಸಿಯೂ ಕೆಲವು ವಿಚಾರ ಮತ್ತೆ ಮಾತನಾಡ್ತೇನೆ. ರಾಜೀನಾಮೆ ಬಗ್ಗೆ ಏನ್ ಹೇಳಿದ್ದಾರೆ ಗೊತ್ತಿಲ್ಲ, ಒನ್ ಟು ಒನ್ ಮಾತನಾಡಿದ್ರೆ ಸ್ಪಷ್ಟವಾಗುತ್ತೆ
ಎಂದು ಬೊಮ್ಮಾಯಿ ಹೇಳಿದ್ದಾರೆ.
`ಅಲ್ಲಿನ ಘಟನೆ ಮತ್ತು ಎಫ್ ಐಆರ್ ಆದ ನಂತರ ಏನಾಗಿದೆ ಅಂತ ಅವರ ಜೊತೆ ಮಾತನಾಡ್ತೇನೆ. ವಿರೋಧ ಪಕ್ಷದವರು ಇದರಲ್ಲಿ ತಪ್ಪು ಕಂಡು ಹುಡುಕುವ ಪ್ರಯತ್ನ ಮಾಡ್ತಿದಾರೆ. ತನಿಖೆ ನಂತರ ಸತ್ಯಾಂಶ ಹೊರಗೆ ಬರುತ್ತದೆ. ತನಿಖೆಯಲ್ಲಿ ಯಾರು ಇದರಲ್ಲಿ ಪಾತ್ರ ವಹಿಸಿದ್ದಾರೆ, ಮತ್ತು ಇದರ ಹಿನ್ನೆಲೆ ಏನು ಅನ್ನೋದು ಗೊತ್ತಾಗುತ್ತದೆ. ಕಾನೂನು ಪ್ರಕಾರ ತನಿಖೆ ನಡೆಯುತ್ತದೆ, ನಾವು ಹಸ್ತಕ್ಷೇಪ ಮಾಡಲ್ಲ. ವರಿಷ್ಟರಿಗೆ ಎಲ್ಲಾ ವಿಚಾರ ಗೊತ್ತಿದೆ, ನಾನು ಕೂಡ ಹೇಳಿದ್ದೇನೆ, ಅವರಿಗೂ ಗೊತ್ತಿದೆ’ ಎಂದು ಬೊಮ್ಮಾಯಿ ಹೇಳಿದ್ದಾರೆ.