ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಮೆಚ್ಚಿಸಲು ಹಿಂದಿ ಗುಲಾಮಗಿರಿ ಪ್ರದರ್ಶಿಸಿದ್ದಾರೆ.
ನರೇಂದ್ರ ಮೋದಿಯವರ ಮೈಸೂರು ಭೇಟಿಯ ವೇಳೆ ಉಡುಗೊರೆ ನೀಡಲು ಸಂಸದ ಪ್ರತಾಪ್ ಸಿಂಹ ಅವರು, ತಮ್ಮ ಉಡುಗೊರೆಯನ್ನು ಹಿಂದಿಮಯ ಮಾಡಿದ್ದಾರೆ. ಪ್ರತಾಪ್ ಸಿಂಹ ಅವರ ಈ ಮನಸ್ಥಿತಿಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ಬಗ್ಗೆ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ ಅವರು, ಪ್ರಧಾನಿಗಳ ಉಡುಗೊರೆ ಹಿಂದಿಮಯ. ಇದನ್ನು ಮೈಸೂರಿನ ಚಿನ್ನದ ವ್ಯಾಪಾರಿಗಳು ಕೊಟ್ಟಿದ್ದಂತೆ ಅವರಿಗೆ ಕನ್ನಡವೇ ಬೇಕಿಲ್ಲ ಅನ್ನಿಸುತ್ತೇ ಹೋಗಲಿ. ಪ್ರತಾಪ್ ಸಿಂಹ ಅವರೇ ನೀವಾದ್ರೂ ಅವರಿಗೆ ಹೇಳಿ ಇದನ್ನು ಕನ್ನಡದಲ್ಲಿ ಮಾಡಿಸಿ ಕೊಟ್ಟಿದ್ರೆ ಪ್ರಧಾನಿಗಳ ಕಚೇರಿಯಲ್ಲಿ ನಮ್ಮ ಕನ್ನಡವು ಇರುತ್ತಿತ್ತು ಅಲ್ಲವೇ. ನಾವು ಗುತಿಸಿಕೊಳ್ಳಬೇಕಾದ್ದು ನಮ್ಮ ಕನ್ನಡದಿಂದಲೇ ಎಂದು ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.