ಮುಸ್ಲಿಂ ಯುವಕ ಮುಷ್ತಾಕ್ ಅಲಿ ಎಂಬ ಹೆಸರಲ್ಲಿ ನಕಲಿ ಫೇಸ್ಬುಕ್ ಅಕೌಂಟ್ ತೆರೆದು ದ್ವೇಷಪೂರಿತ ಬರಹಗಳನ್ನು ಪೋಸ್ಟ್ ಮಾಡುತ್ತಿದ್ದ ಹಿಂದೂ ಯುವಕನನ್ನು ಬಾಗಲಕೋಟೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಖಾಸಗಿ ಬ್ಯಾಂಕ್ ಉದ್ಯೋಗಿ ಆಗಿರುವ ಸಿದ್ದಾರೂಢ ಶ್ರೀಕಾಂತ್ ಎಂಬವನು ಮುಷ್ತಾಕ್ ಅಲಿ ಎಂಬ ಹೆಸರಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದಿದ್ದ. ಈತ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನವನು.
ಈ ಫೇಸ್ಬುಕ್ ಖಾತೆ ವಿರುದ್ಧ ಹಿಂದೂ ಸಂಘಟನೆಗಳು ಪೊಲೀಸರಿಗೆ ದೂರು ನೀಡಿದ್ದವು. ಈತ ಬಿಜೆಪಿ ಎಂಎಲ್ಸಿ ಅರುಣ್ ಅವರಿಗೂ ಬೆದರಿಕೆ ಹಾಕಿದ್ದ.
ಶಿವಮೊಗ್ಗದಲ್ಲಿ ಬಜರಂಗದಳದ ಕಾರ್ಯಕರ್ತ ಹರ್ಷ ಕೊಲೆಯ ಬಳಿಕ ಫೇಸ್ಬುಕ್ ಅಕೌಂಟ್ ತೆರದು ಪ್ರಚೋದನಾಕರಿ ಬರಹಗಳನ್ನು ಹಾಕುತ್ತಿದ್ದ. ಈತ ತನ್ನ ಫೇಸ್ಬುಕ್ ಖಾತೆಯಲ್ಲಿ ತಾನು ಬಾಲಗಕೋಟೆ ನಿವಾಸಿ ಎಂದು ತೋರಿಸಿಕೊಂಡಿದ್ದ.