ADVERTISEMENT
ಮಧ್ಯಪ್ರದೇಶದ ಸತ್ನಾ ಜಿಲ್ಲೆಯ 62 ವರ್ಷದ ಓರ್ವ ವ್ಯಕ್ತಿ ಒಂದೇ ಬಾರಿಗೆ ಮೂವರು ಮಕ್ಕಳ ತಂದೆ ಆಗಿದ್ದಾರೆ.
ಉಚೆಹ್ರಾ ಮಂಡಲ್ನ ಅತರ್ವೇದಿಯಾ ಖುರ್ದ್ ಗ್ರಾಮದ 62 ವರ್ಷದ ವ್ಯಕ್ತಿ ಗೋವಿಂದ್ ಕುಶ್ವಾಹ್ ಅವರಿಗೆ 30 ವರ್ಷದ ಹೀರಾಬಾಯಿ ಎರಡನೇ ಪತ್ನಿ.
ಸೋಮವಾರ ರಾತ್ರಿ ಹೆರಿಗೆ ನೋವು ಬಂದ ಕಾರಣ ಸತ್ನಾ ಜಿಲ್ಲಾಸ್ಪತ್ರೆಗೆ ಹೀರಾಬಾಯಿಯನ್ನು ಅಡ್ಮಿಟ್ ಮಾಡಲಾಗಿತ್ತು.
ಮಂಗಳವಾರ ಬೆಳಗೆಗ ವೈದ್ಯರು ಸೀಸೇರಿಯನ್ ಮಾಡಿದಾಗ, ಆಕೆ ಒಂದೇ ಹೆರಿಗೆಯಲ್ಲಿ ಮೂವರು ಮಕ್ಕಳಿಗೆ ಜನ್ಮ ನೀಡಿದ್ದಾರೆ.
ನವಜಾತ ಶಿಶುಗಳು ಸ್ವಲ್ಪ ಬಲಹೀನರಾಗಿರುವ ಕಾರಣ ಆಸ್ಪತ್ರೆಯ ವಿಶೇಷ ವಾರ್ಡ್ನಲ್ಲಿ ಇರಿಸಿ ಆರೈಕೆ ಮಾಡಲಾಗುತ್ತಿದೆ.
ಗೋವಿಂದ ಮೊದಲ ಪತ್ನಿ ಕಸ್ತೂರಿಬಾಯಿ.. ಅವರ ವಯಸ್ಸು 60 ವರ್ಷ. ಈ ದಂಪತಿಯ 18ವರ್ಷದ ಪುತ್ರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ.
ವಂಶೋದ್ಧಾರಕ್ಕಾಗಿ ಕಸ್ತೂರಿಬಾಯಿಯೇ ಮುಂದೆ ನಿಂತು ಪತಿಗೆ ಎರಡನೇ ವಿವಾಹ ಮಾಡಿಸಿದ್ದರು.
ಮದುವೆಯಾದ ಆರು ವರ್ಷಕ್ಕೆ ಗೋವಿಂದ್-ಹೀರಾಬಾಯಿ ದಂಪತಿ ಟ್ರಿಪಲ್ ಧಮಾಕಾ ಲಾಟರಿ ಹೊಡೆದಿದ್ದಾರೆ.
ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ
ADVERTISEMENT