ಹನಿಟ್ರ್ಯಾಪ್ (Honey Trap) ಪ್ರಕರಣದಲ್ಲಿ ಬೆಂಗಳೂರು ಪೊಲೀಸರು (Bengaluru Police) ಕನ್ನಡದ ನಟನನ್ನು ಬಂಧಿಸಿದ್ದಾರೆ.
ಬೆಂಗಳೂರಿನ ಜೆಪಿ ನಗರದ ನಿವಾಸಿ ಯುವರಾಜ್ ಅಲಿಯಾಸ್ ಯುವ ಬಂಧಿತ ಯುವ ನಟ. ಈತನ ಇಬ್ಬರು ಸ್ನೇಹಿತೆಯರಾದ ಕವನ ಮತ್ತು ನಿಧಿ ಎಂಬವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ನಾಲ್ಕು ವರ್ಷದ ಹಿಂದೆ 73 ವರ್ಷದ ಉದ್ಯಮಿ ಮತ್ತು ಕವನಳ ಪರಿಚಯ ಆಗಿತ್ತು. ವಾರದ ಹಿಂದೆಯಷ್ಟೇ ಈಕೆ ನಿಧಿಯನ್ನೂ ಕೂಡಾ ಆ ಉದ್ಯಮಿಗೆ ಪರಿಚಯಿಸಿದ್ದಳು.
ನಿಧಿ ಮತ್ತು ಕವನ ಇಬ್ಬರ ಜೊತೆಯೂ ಆ ಉದ್ಯಮಿ ವಾಟ್ಸಾಪ್ ಮೂಲಕ ಸಂಪರ್ಕದಲ್ಲಿದ್ದರು.
ಇಬ್ಬರೂ ತಮ್ಮ ಪೋಟೋಗಳನ್ನು ಆ ಉದ್ಯಮಿಗೆ ಕಳಿಸುತ್ತಿದ್ದರು.
ಈ ನಡುವೆ ಆಗಸ್ಟ್ 3ರಂದು ತನ್ನನ್ನು ಭೇಟಿ ಆಗುವಂತೆ ನಿಧಿ ಆ ಉದ್ಯಮಿಗೆ ಹೇಳಿದ್ದಳು. ಅದರಂದತೆ ಭೇಟಿ ಆದ ವೇಳೆ ಆಕೆಯ ಜೊತೆಗಿದ್ದ ಇಬ್ಬರು ಅಪರಿಚಿತರು ನಾವು ಪೊಲೀಸರು ಎಂದು ಹೇಳಿಎ ಆ ಉದ್ಯಮಿಯ ಕಾರಿನೊಳಗೆ ನುಗ್ಗಿದ್ದರು.
ಅಲ್ಲದೇ ಕವನ ಮತ್ತು ನಿಧಿಯ ಜೊತೆಗೆ ಉದ್ಯಮಿ ಮಾಡಿದ್ದ ವಾಟ್ಸಾಪ್ ಮೆಸೇಜ್ ಆಧರಿಸಿ ಕೇಸ್ ಹಾಕಿದ್ದಾಗಿಯೂ ಒಂದು ವೇಳೆ ದುಡ್ಡು ಕೊಟ್ಟರೇ ಪ್ರಕರಣ ಮುಚ್ಚಿ ಹಾಕುವುದಾಗಿಯೂ ಬೆದರಿಸಿದ್ದರು.
ಇವರ ಬೆದರಿಕೆ ಹಿನ್ನೆಲೆಯಲ್ಲಿ ಎರಡು ಬಾರಿ ಆ ಉದ್ಯಮಿ ಒಟ್ಟು 10 ಲಕ್ಷ ರೂಪಾಯಿ ದುಡ್ಡು ನೀಡಿದ್ದ. ಆ ಬಳಿಕ ಆ ದುಷ್ಕರ್ಮಿಗಳ ಆ ಉದ್ಯಮಿಯಿಂದ ಮತ್ತೆ 5 ಲಕ್ಷ ರೂಪಾಯಿ ದೋಚಿದ್ದರು.
ಬೆದರಿಕೆ ಮತ್ತು ಸುಲಿಗೆ ನಿಲ್ಲದ ಹಿನ್ನೆಲೆಯಲ್ಲಿ ಆ ಉದ್ಯಮಿ ಹಲಸೂರು ಗೇಟ್ ಠಾಣೆ (Halasuru Gate Police) ಪೊಲೀಸರು ದೂರು ನೀಡಿದ್ದರು.
ADVERTISEMENT
ADVERTISEMENT