ಕುಂದಾಪುರ: ಮದುವೆಯಾದ ಬಳಿಕ ಹನಿಮೂನ್ಗೆ ಹೋಗಬೇಕಿದ್ದ ನವದಂಪತಿ (Couple) ತಮ್ಮೂರಿನ ಬೀಚ್ ಸ್ವಚ್ಛಗೊಳಿಸಿ ಮಾದರಿಯಾಗಿದ್ದರು. ಇವರ ಈ ಕಾರ್ಯಕ್ಕೆ ಮೆಚ್ಚಿದ ಪ್ರಧಾನಿ ನರೆಂಂದ್ರ ಮೋದಿಯವರು ( ಮನ್ ಕಿ ಬಾತ್ನಲ್ಲಿ ಉಲ್ಲೇಖಿ ಶ್ಲಾಘಿಸಿದ್ದರು. ಇದೀಗ ಈ ದಂಪತಿಗೆ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದಲ್ಲಿ ಭಾಗವಹಿಸುವ ಅಪರೂಪದ ಆಹ್ವಾನ ಸಿಕ್ಕಿದೆ.
ನವೆಂಬರ್ 2020ರಲ್ಲಿ ಮದುವೆಯಾದ ಬೈಂದೂರಿನ ಅನುದೀಪ್ ಮತ್ತು ಮಿನುಷಾ ಅವರು ಹನಿಮೂನ್ಗೆ ದೂರದ ಊರುಗಳಿಗೆ ತೆರಳುವ ಬದಲು ಸ್ಥಳೀಯ ಸೋಮೇಶ್ವರ ಬೀಚ್ ಸ್ವಚ್ಛಗೊಳಿಸಿ ಸುದ್ದಿಯಾಗಿದ್ದರು. ದಂಪತಿಯ ಈ ಕಾರ್ಯವು ಪ್ರಧಾನಿ ನರೇಂದ್ರ ಮೋದಿಯವರ ಗಮನ ಸೆಳೆದಿದೆ. ಹೀಗಾಗಿ ಅವರು ತಮ್ಮ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ದಂಪತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದೀಗ ಅವರು ಗಣರಾಜ್ಯೋತ್ಸವದಲ್ಲಿ ಭಾಗವಹಿಸುವ ಸಲುವಾಗಿ ದೆಹಲಿಗೆ ತೆರಳಿದ್ದಾರೆ.