ಪ್ರಧಾನಮಂತ್ರಿ ವಸತಿ ಯೋಜನೆಯಡಿ ಕಟ್ಟಲಾದ ಮನೆಯನ್ನೇ ಮಧ್ಯಪ್ರದೇಶದ ಬಿಜೆಪಿ ಸರ್ಕಾರ ನೆಲಸಮ ಮಾಡಿದೆ.
ರಾಮನವಮಿ ಮೆರವಣಿಗೆ ವೇಳೆ ನಡೆದ ಹಿಂಸಾಚಾರದ ಬಳಿಕ ಜಿಲ್ಲಾಡಳಿತ ಹಲವು ಮನೆಗಳನ್ನು ನೆಲಸಮ ಮಾಡಿದೆ. ಆ ಮನೆಗಳಲ್ಲಿ ಖಾರ್ಗೋನೆಯ ಖಾಸ್ಖಾಸ್ವಾಡಿ ಪ್ರದೇಶದ ಬಿರ್ಲಾ ಮಾರ್ಗದಲ್ಲಿ ವಸತಿ ಯೋಜನೆಯನ್ನು ನಿರ್ಮಿಸಲಾದ ಮನೆಯೂ ಸೇರಿದೆ.
ಹಸೀನಾ ಫಾರೂಕ್ ಅವರ ಪತಿಯ ಹೆಸರಲ್ಲಿ ಪ್ರಧಾನಮಂತ್ರಿ ವಸತಿ ಯೋಜನೆಯಡಿ ಈ ಮನೆ ನಿರ್ಮಾಣ ಆಗಿತ್ತು ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಈ ಪ್ರದೇಶದಲ್ಲಿ ಜಿಲ್ಲಾಡಳಿತ ಒಟ್ಟು 12 ಮನೆಗಳನ್ನು ಒಡೆದು ಹಾಕಲಾಗಿದೆ. ನಾಲ್ಕು ಕಡೆಗಳಲ್ಲಿ 16 ಮನೆಗಳು ಮತ್ತು 29 ಅಂಗಡಿಗಳನ್ನು ಕೆಡವಲಾಗಿದೆ.