ಲಖನೌ ನಗರದ ಹಜರತ್ಗಂಜ್ ಪ್ರದೇಶದ ಮದನ್ ಮೋಹನ್ ಮಾಳವಿಯಾ ಮಾರ್ಗ್ನಲ್ಲಿರುವ ಲೆವಾನಾ ಸೂಟ್ಸ್ನಲ್ಲಿರುವ ಹೋಟೆಲ್ನಲ್ಲಿ ಸೋಮವಾರ ಬೆಂಕಿ ಕಾಣಿಸಿಕೊಂಡು ಇಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಟ್ಟಡದಲ್ಲಿ 30 ಕೊಠಡಿಗಳಿದ್ದು, ಘಟನೆ ಸಮಯದಲ್ಲಿ 18 ಕೊಠಡಿಗಳಲ್ಲಿ ತಂಗಿದ್ದರು. ಅಲ್ಲಿ 35-40 ಜನರಿದ್ದರು ಮತ್ತು ಬೆಳಿಗ್ಗೆ ಕೆಲವರು ಹೋಟೆಲ್ನಿಂದ ಹೊರಬಂದಿದ್ದರು. ಅಗ್ನಿಶಾಮಕ ತಂಡಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ ಮತ್ತು ಅನೇಕ ಜನರನ್ನು ಹೋಟೆಲ್ನಿಂದ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸೂರ್ಯಪಾಲ್ ಗಂಗ್ವಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿರಬಹುದು. ನಿಖರವಾದ ಕಾರಣ ಏನೆಂಬುದನ್ನು ಕಂಡುಹಿಡಿಯಲಾಗುತ್ತಿದೆ. ಮೊದಲ ಮಹಡಿಯ ಬ್ಯಾಂಕ್ವೆಟ್ ಹಾಲ್ನಲ್ಲಿ ಔತಣಕೂಟವಿತ್ತು ಎಂದು ಹೋಟೆಲ್ ಮಾಲೀಕರು ನಮಗೆ ತಿಳಿಸಿದ್ದಾರೆ ಎಂದು ತಿಳಿಸಿದರು.
12 ಜನರನ್ನು ಶ್ಯಾಮ ಪ್ರಸಾದ್ ಮುಖರ್ಜಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.