2023ರಿಂದ 2027ರವರೆಗೆ ನಡೆಯುವ ಐಪಿಎಲ್ ಕ್ರಿಕೆಟ್ ಸರಣಿಯ ಮಾಧ್ಯಮ ಪ್ರಸಾರದ ಹಕ್ಕು ಬರೋಬ್ಬರೀ 48,390 ಕೋಟಿ ರೂಪಾಯಿ ಬಿಕರಿ ಆಗಿದೆ.
ರಿಲಯನ್ಸ್ ಇಂಡಸ್ಟಿçÃಸ್ ಮಾಲೀಕತ್ವದ ವಯಾಕಾಮ್18 ಡಿಜಿಟಲ್ ಪ್ರಸಾರದ ಹಕ್ಕನ್ನೂ, ಸ್ಟಾರ್ ಟಿವಿ ಟಿವಿ ಪ್ರಸಾರದ ಹಕ್ಕನ್ನು ಖರೀದಿಸಿವೆ.
ಈ ಐದು ವರ್ಷಗಳಲ್ಲಿ ಒಟ್ಟು 410 ಐಪಿಎಲ್ ಪಂದ್ಯಗಳು ನಡೆಯಲಿವೆ. ಈ ಲೆಕ್ಕಾಚಾರದಲ್ಲಿ ಮಾಧ್ಯಮ ಹಕ್ಕಿನ ಮಾರಾಟದ ಆದಾಯವನ್ನು ನೋಡುವುದಾದರೆ ಐದು ವರ್ಷಗಳಲ್ಲಿ ಪ್ರತಿ ಎಸೆತಕ್ಕೂ ಬಿಸಿಸಿಐ 49 ಲಕ್ಷ ರೂಪಾಯಿ ಆದಾಯ ಗಳಿಸಲಿದೆ.
ಪ್ರತಿ ಓವರ್ಗೂ 2.95 ಕೋಟಿ ರೂಪಾಯಿ ಆದಾಯ ಗಳಿಸಲಿದೆ. ಅಂದರೆ ಪ್ರತಿಯೊಂದು ಪಂದ್ಯದಿAದ ಬಿಸಿಸಿಐಗೆ 118 ಕೋಟಿ ರೂಪಾಯಿ ಆದಾಯ ಬರಲಿದೆ.
2018ರಲ್ಲಿ ಸ್ಟಾರ್ ಇಂಡಿಯಾ ಐದು ವರ್ಷದ ಮಟ್ಟಿಗೆ ಬಿಸಿಸಿಐಗೆ 6,138 ಕೋಟಿ ರೂಪಾಯಿಗೆ ಅಂದ್ರೆ ಪ್ರತಿ ಪಂದ್ಯಕ್ಕೆ 60 ಕೋಟಿ ರೂಪಾಯಿಯಂತೆ ಪಾವತಿಸಿ ಮಾಧ್ಯಮ ಪ್ರಸಾರದ ಹಕ್ಕನ್ನು ಗೆದ್ದಿತ್ತು.
ಡಿಸ್ನಿ ಸ್ಟಾರ್ 23,575 ಕೋಟಿ ರೂಪಾಯಿಗೆ ಟಿವಿ ಪ್ರಸಾರದ ಹಕ್ಕನ್ನು, ವಾಯಕಾಮ್18 23,758 ಕೋಟಿ ರೂಪಾಯಿಗೆ ಡಿಜಿಟಲ್ ಪ್ರಸಾರದ ಹಕ್ಕನ್ನು ಗೆದ್ದುಕೊಂಡಿವೆ.