‘RRR’ ಚಿತ್ರ ಇಂದು ಶುಕ್ರವಾರ ಮಾರ್ಚ್ 25 ರಂದು ವಿಶ್ವಾದ್ಯಂತ ಭರ್ಜರಿಯಾಗಿ ಬಿಡುಗಡೆಯಾಗಿದೆ. ರಾಜ ಮೌಳಿ ನಿರ್ದೇಶನದ RRR ಚಿತ್ರ ಈಗಾಗಲೇ ಪ್ರೇಕ್ಷಕರಿಂದ ಮೆಚ್ಚುಗೆಯನ್ನು ಪಡೆಯುತ್ತಿದೆ.
ಚಿತ್ರದ ತಾರಾಗಣದಲ್ಲಿ ಜೂ.ಎನ್ಟಿಆರ್, ರಾಮ್ಚರನ್, ಅಜಯ್ ದೇವಗನ್ ಹಾಗೂ ಆಲಿಯಾ ಭಟ್ ಇರುವುದು ಚಿತ್ರಕ್ಕೆ ಮತ್ತಷ್ಟು ಮೆರಗನ್ನು ತಂದಿತ್ತು. ಸಾಮಾಜಿಕ ಜಾಲತಾಣಗಳ ಮೂಲಕ ಚಿತ್ರ ನೋಡಿದ ಪ್ರೇಕ್ಷಕರು ಚಿತ್ರದಲ್ಲಿ ನಟನೆ, ಚಿತ್ರಕಥೆ, ಸಾಹಸ ದೃಶ್ಯಗಳು ಹಾಗೂ ನೃತ್ಯ ಸೇರಿದಂತೆ ಹಲವು ವಿಭಾಗಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
ಹಾಗಾದರೆ, RRR ಚಿತ್ರದ ಒಟ್ಟು ಬಜೆಟ್ ಹಾಗೂ ನಟರು ಪಡೆದ ಸಂಭಾವನೆ ಎಷ್ಟು ಎನ್ನುವುದನ್ನು ನೋಡೋಣ.
RRR ಚಿತ್ರದ ಒಟ್ಟು ಬಜೆಟ್ :
ಈ ತಿಂಗಳ ಆರಂಭದಲ್ಲಿ, ಆಂಧ್ರಪ್ರದೇಶದ ಸಚಿವ ಪೆರ್ನಿ ನಾನಿ ಅವರು ‘ಆರ್ಆರ್ಆರ್’ ವಿಶೇಷ ಟಿಕೆಟ್ ದರಗಳ ವಿಷಯವನ್ನು ಚರ್ಚಿಸುವಾಗ ಚಿತ್ರದ ಬಜೆಟ್ ಅನ್ನು ಬಹಿರಂಗಪಡಿಸಿದ್ದರು. ಪತ್ರಿಕಾ ಹೇಳಿಕೆಯಲ್ಲಿ ಮಾಹಿತಿ ನೀಡಿದ್ದ ಪೆರ್ನಿ ನಾನಿ ಅವರು, ಎಸ್ಎಸ್ ರಾಜಮೌಳಿ ನಿರ್ದೇಶನದ ಈ ಚಿತ್ರಕ್ಕೆ ಜಿಎಸ್ಟಿ ಹಾಗೂ ಕಲಾವಿದರ ಸಂಭಾವನೆಯನ್ನು ಹೊರತುಪಡಿಸಿ 336 ಕೋ.ರೂಗಳ ಬಜೆಟ್ ನಲ್ಲಿ ನಿರ್ಮಿಸಲಾಗಿದೆ ಎಂದಿದ್ದರು.
RRR ಚಿತ್ರದಲ್ಲಿ ರಾಮ್ಚರಣ್ ಸಂಭಾವನೆ ಎಷ್ಟು..?
RRR ಚಿತ್ರದ ಅಲ್ಲೂರಿ ಸೀತಾರಾಮ್ ಪಾತ್ರಕ್ಕಾಗಿ ರಾಮ್ಚರಣ್ ಅವರು, 45 ಕೋಟಿ ರೂ ಪಡೆದಿದ್ದಾರೆ ಎಂದು ಬಾಲಿವುಡ್ಲೈಪ್.ಕಾಮ್ ವೆಬ್ಸೈಟ್ ವರದಿಮಾಡಿದೆ.
RRR ಚಿತ್ರದಲ್ಲಿ ಜೂ.ಎನ್ಟಿಆರ್ ಸಂಭಾವನೆ ಎಷ್ಟು..?
ದಕ್ಷಣ ಕನ್ನಡದ ಖ್ಯಾತ ನಟ ಜೂ.ಎನ್ಟಿಆರ್ ಅವರು RRR ಚಿತ್ರದ ಕೊಮರಾಂ ಭೀಮ್ ಪಾತ್ರದ ನಟನೆಗಾಗಿ 45 ಕೋಟಿ ರೂ ಸಂಭಾವನೆ ಪಡೆದಿದ್ದಾರೆ ಎಂದು ರಿಪಬ್ಲಿಕ್.ಕಾಮ್ ವರದಿ ಮಾಡಿದೆ.
RRR ಚಿತ್ರದಲ್ಲಿ ಅಜಯ್ ದೇವಗನ್ ಸಂಭಾವನೆ ಎಷ್ಟು..?
ಮಾಧ್ಯಮಗಳ ವರದಿಯ ಪ್ರಕಾರ RRR ಚಿತ್ರದಲ್ಲಿ ನಟಿಸಲು ಅಜಯ್ ದೇವಗನ್ 25 ಕೋ.ರೂಗಳ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.
RRR ಚಿತ್ರದಲ್ಲಿ ಆಲಿಯಾ ಭಟ್ ಸಂಭಾವನೆ ಎಷ್ಟು..?
RRR ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿರುವ ಆಲಿಯಾ ಭಟ್ ಅವರು 9 ಕೋ.ರೂಗಳ ಸಂಭಾವನೆ ಪಡೆದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.