ಚಟ್ನಿಯಲ್ಲಿ ಹಲವು ಬಗೆಗಳಿವೆ. ಟೊಮೆಟೊ, ಈರುಳ್ಳಿ, ಶೇಂಗಾ ಚಟ್ನಿಯನ್ನು ಮಾಡಲಾಗುತ್ತದೆ. ಹೀರೆಕಾಯಿಂದ ದೋಸೆ, ಹುಳಿ, ಪಲ್ಯ, ಚಟ್ನಿ ಹೀಗೆ ನಾನಾ ಬಗೆಯ ಅಡುಗೆಗಳನ್ನು ತಯಾರಿಸುತ್ತೇವೆ. ಆದರೆ ಹೀರೆಕಾಯಿ ಸಿಪ್ಪೆಯಿಂದ ಚಟ್ನಿಯನ್ನು ತಯಾರಿಸಬಹುದು. ನಾವು ಇಂದು ಹೀರೆಕಾಯಿ ಸಿಪ್ಪೆಯಿಂದ ಚಟ್ನಿಯನ್ನು ಮಾಡುವ ಸರಳ ವಿಧಾನ ಹೇಳುತ್ತೇವೆ.
ಬೇಕಾಗುವ ಸಾಮಗ್ರಿಗಳು:
* ಹೀರೆಕಾಯಿ ಸಿಪ್ಪೆ-1 ಕಪ್
* ಒಣ ಮೆಣಸು 4-5
* ಉದ್ದಿನ ಬೇಳೆ -ಅರ್ಧ ಚಮಚ
* ತೆಂಗಿನ ತುರಿ – ಅರ್ಧ ಕಪ್
* ಹುಣಸೆ ಹಣ್ಣು- ಸ್ವಲ್ಪ
* ರುಚಿಗೆ ತಕ್ಕ ಉಪ್ಪು
* ಇಂಗು ಚಿಟಿಕೆಯಷ್ಟು
* ಕರಿಬೇವಿನ ಎಲೆ
ಮಾಡುವ ವಿಧಾನ:
* ಹೀರೆಕಾಯಿ ಸಿಪ್ಪೆಯನ್ನು ಚಿಕ್ಕ ಬಾಣಲೆಯಲ್ಲಿ ಹಾಕಿ ಸ್ವಲ್ಪ ಎಣ್ಣೆ ಹಾಕಿ ಹುರಿಯಬೇಕು.
* ನಂತರ ಅದನ್ನು ತಟ್ಟೆಗೆ ತೆಗೆದಿಟ್ಟು, ಅದೇ ಬಾಣಲೆಗೆ ಒಂದು ಚಮಚ ಎಣ್ಣೆ ಹಾಕಿ. ಎಣ್ಣೆ ಕಾದ ಕೂಡಲೇ ಸ್ವಲ್ಪ ಉದ್ದಿನಬೇಳೆ, ಒಣಮೆಣಸು ಹಾಕಿ ಹುರಿಯಬೇಕು.
* ಹುರಿದು ಹೀರೆಕಾಯಿ ಸಿಪ್ಪೆ, ಒಮಮೆಣಸು, ಉದ್ದಿನಬೇಳೆ, ಹುಣಸೆಹಣ್ಣು, ತೆಂಗಿನಕಾಯಿ ಸೇರಿಸಿ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.