* ಮನೆ ಪರಿಸರದಲ್ಲಿ ಔಷಧಿ ಗಿಡಗಳನ್ನು (Medicine plants)ಬೆಳೆಸಿ. ಇವು ಸೊಳ್ಳೆಗಳನ್ನು ನಿರೋಧಿಸುತ್ತವೆ.
* ತುಳಸಿ (Tulasi), ಪುದಿನಾ (Pudina)ಗಿಡಗಳ ವಾಸನೆಗೆ ಸೊಳ್ಳೆಗಳು ಪರಾರಿಯಾಗುತ್ತವೆ
* ಮುಚ್ಚಿದ ಕೋಣೆಯಲ್ಲಿ ಕರ್ಪೂರ ಹಚ್ಚಿ 30ನಿಮಿಷ ಹಾಗೆಯೇ ಬಿಡಬೇಕು. ಇದರಿಂದ ಹೊರಹೊಮ್ಮುವ ಘಾಟು ವಾಸನೆ ಸೊಳ್ಳೆಗಳನ್ನು ಹೊರದಬ್ಬುತ್ತವೆ.
* ಲ್ಯಾವೆಂಡರ್(Lavender), ಟೀ ಟ್ರೀಯಂತಹ ಎಣ್ಣೆಗಳನ್ನು ಬಳಿದುಕೊಂಡರೇ ಸೊಳ್ಳೆಗಳು ನಮ್ಮ ಹತ್ತಿರ ಸುಳಿಯಲ್ಲ.. ಲ್ಯಾವೆಂಡರ್ ಕ್ಯಾಂಡಲ್ (Lavender Candle)ಹಚ್ಚಿದಲ್ಲಿ ಸೊಳ್ಳಿಗಳು ಅಲ್ಲಿರಲ್ಲ
* ಬೆಳ್ಳುಳ್ಳಿ(Garlic), ಲವಂಗಾ(Lavanga)ದಿಂದ ತಯಾರಿಸಿದ ದ್ರಾವಣವನ್ನು ಮನೆಯೊಳಗೆ ಸಿಂಪಡಿಸಿದಲ್ಲಿ ಸೊಳ್ಳೆಗಳ ಜೊತೆ ನೊಣಗಳು ಕೂಡ ಮನೆಯೊಳಗೆ ಬರಲ್ಲ.
* ಲೆಮನ್ ಗ್ರಾಸ್ ರಸವನ್ನು ಸ್ಪ್ರೇ (Lemon grass liquid spray)ಮಾಡಿದಲ್ಲಿ, ಅದರ ಸುವಾಸನೆಗೆ ಸೊಳ್ಳೆಗಳು ಓಡಿ ಹೋಗುತ್ತವೆ
* ಸೊಳ್ಳೆ ಪರದೆಗಳನ್ನು ಮನೆ ಬಾಗಿಲು, ಕಿಟಕಿಗೆ ಅಳವಡಿಸಿದಲ್ಲಿ ಸೊಳ್ಳೆಗಳು ಮನೆಯೊಳಗೆ ಎಂಟ್ರಿ ಕೊಡುವ ಸಂಭವ ಕಡಿಮೆ.. ಹಾಗೆಯೇ ನಿದ್ರಿಸುವಾಗ ಬೆಡ್ ಸುತ್ತಲೂ ಸೊಳ್ಳೆ ಪರದೆ ಕಟ್ಟಿಕೊಳ್ಳಬಹುದು.
* ಕಿತ್ತಳೆ ಹಣ್ಣು ಆರೋಗ್ಯಕ್ಕೆ ಒಳ್ಳೆಯದು. ಆದರೆ, ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಅದನ್ನು ಸುಟ್ಟರೇ ಅದರ ವಾಸನೆಗೆ ಸೊಳ್ಳೆಗಳು ಹತ್ತಿರ ಸುಳಿಯಲ್ಲ.
* ಬೇವಿನೆಣ್ಣೆ, ಹರಿಷಿನದಿಂದಲೂ ಸೊಳ್ಳೆಗಳನ್ನು ನಿವಾರಿಸಬಹುದು. ನೀರಿನಲ್ಲಿ ಅರಿಷಿಣ ನೀರು ನಿಂತ ಜಾಗದಲ್ಲಿ, ಹೂದಾನಿಯಲ್ಲಿ ಹಾಕಿದರೇ ಸೊಳ್ಳೆಗಳು ಬರಲ್ಲ