ವಿವಾದಿತ ಹುಬ್ಬಳ್ಳಿಯ (Hubballi) ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅವಕಾಶ ನೀಡಿದ ಬೆನ್ನಲ್ಲೇ, ನಮಗೂ ಅವಕಾಶ ನೀಡಬೇಕು ಎಂದು ಕ್ರೈಸ್ತ ಸಂಘಟನೆಗಳು ಮಹಾನಗರ ಪಾಲಿಕೆಗೆ ಪತ್ರ ಬರೆದಿವೆ.
ಮಂಗಳವಾರವಷ್ಟೇ ಗಣೇಶೋತ್ಸವ ಆಚರಣೆಗೆ ಹುಬ್ಬಳ್ಳಿ-ಧಾರವಾಡ ಮಹನಾಗರ ಪಾಲಿಕೆ ಗಣೇಶೋತ್ಸವ ಸಮಿತಿಗೆ ಅವಕಾಶ ನೀಡಿತ್ತು. ಈ ಪಾಲಿಕೆಗೆ ಈ ಆದೇಶಕ್ಕೆ ತಡೆ ನೀಡುವಂತೆ ವಕ್ಫ್ ಬೋರ್ಡ್ ಹೈಕೋರ್ಟ್ ಮೆಟ್ಟಿಲೇರಿತ್ತು. ಆದರೆ, ಹೈಕೋರ್ಟ್ ಮಧ್ಯಂತರ ಆದೇಶ ನೀಡಲು ನಿರಾಕರಿಸಿತ್ತು. ಇಂದು ಬೆಳ್ಳಂಬೆಳಿಗ್ಗೆಯೇ ಗಣೇಶೋತ್ಸವ ಸಮಿತಿ ಈದ್ಗಾ ಮೈದಾನದಲ್ಲಿ ಗಣೇಶನನ್ನು ಕೂರಿಸಿದೆ.
ಇದನ್ನೂ ಓದಿ : BIG BREAKING: ಹುಬ್ಬಳ್ಳಿ ಈದ್ಗಾ ಮೈದಾನದಲ್ಲೂ ಗಣೇಶೋತ್ಸವಕ್ಕೆ ಅನುಮತಿ
ಇದೀಗ, ಹುಬ್ಬಳ್ಳಿಯ (Hubballi) ಈದ್ಗಾ ಮೈದಾನದಲ್ಲಿ ಕ್ರೈಸ್ತ ಧರ್ಮದ ಪ್ರಾರ್ಥನೆಗೂ ಅವಕಾಶ ನೀಡಬೇಕು ಎಂದು ಕ್ರೈಸ್ತ ಸಂಘಟನೆಗಳು ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸಿವೆ.