ಮುಂದೊಮ್ಮೆ ಅವಕಾಶ ಸಿಕ್ಕರೆ ನೋಡೋಣ. ದಲಿತರ ಸಾಲ ಮನ್ನಾ ಮಾಡುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗುವ ಇಂಗಿತ ಹೊರಹಾಕಿದ್ದಾರೆ.
ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಮಾತನಾಡಿದ ಅವರು, ಅಸ್ಪೃಶ್ಯತೆ ಸಂವಿಧಾನ ಬಾಹಿರ. ಅಸ್ಪೃಶ್ಯತೆ ಕಾನೂನು ಬಾಹಿರ. ಪಟ್ಟಭದ್ರ ಹಿತಾಸಕ್ತಿಗಳ ಜೀವಂತವಾಗಿಟ್ಟಿವೆ. ಶೋಷಿತರು ಇದರ ವಿರುದ್ಧ ಹೋರಾಡಬೇಕು. ಶೋಷಿತರು ಸಾಮಾಜಿಕ ಹಾಗೂ ಆರ್ಥಿಕವಾಗಿ ಸಬಲರಾಗಬೇಕು. ವಿದ್ಯೆ ಎಲ್ಲರಿಗೂ ಹಂಚಿಕೆಯಾಗಬೇಕು. ಸಮಸಮಾಜದ ನಿರ್ಮಾಣ ಇನ್ನೂ ಕನಸಾಗಿದೆ. ವಿದ್ಯಾವಂತರಾದರೆ ಮಾತ್ರ ನಿಮ್ಮ ಗೌರವ ಹೆಚ್ಚಲಿದೆ. ವಿದ್ಯೆ ಇದ್ದರೆ ಗುಲಾಮಗಿರಿ ಕಿತ್ತು ಹಾಕಬಹುದು ಎಂದಿದ್ದಾರೆ.
ಇನ್ನು ದಲಿತರಿಗೆ ಗುತ್ತಿಗೆ ಮೀಸಲಾತಿ ತಂದಿದ್ದು ನಾನು. 50 ಲಕ್ಷದಿಂದ 1ಕೋಟಿ ಹೆಚ್ಚಳಕ್ಕೆ ಘೋಷಿಸಿದೆ. ಆದರೆ ನಂತರ ಅದನ್ನು ಯಾರು ಕ್ಯಾರೇ ಮಾಡಲಿಲ್ಲ. ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಮಾಡಲಿಲ್ಲ. ಯಡಿಯೂರಪ್ಪ, ಬೊಮ್ಮಾಯಿನೂ ಮಾಡಲಿಲ್ಲ. ಈಗ ಪುಸ್ತಕದಿಂದ ಭಗತ್ ಸಿಂಗ್ ಪಾಠ ತೆಗೆದಿದ್ದಾರೆ. ಹೆಗೆಡೇವಾರ್ ಪಾಠ ಪಠ್ಯದಲ್ಲಿ ಸೇರಿಸಿದ್ದಾರೆ. ಹೆಗಡೇವಾರ್ ಯಾರು ಆರ್ಎಸ್ಎಸ್ನವನು. ಜಾತಿವ್ಯವಸ್ಥೆಗೆ ಒತ್ತು ಕೊಟ್ಟವನು. ಇದರ ಬಗ್ಗೆ ಯಾರಾದ್ರೂ ಧ್ವನಿ ಎತ್ತಿದ್ರಾ..? ಯಾರೂ ಇದನ್ನು ವಿರೋಧಿಸಲಿಲ್ಲ ಎಂದರು.