ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಚಿತ್ರ ದೇಶಾದ್ಯಂತ ನಾಗಾಲೋಟ ಮುಂದುವರೆಸಿದೆ. ಬಿಗ್ ಬಜೆಟ್ ಚಿತ್ರಗಳು ಬಿಡುಗಡೆಯಾದರೂ ಮೂರನೇ ವಾರವೂ ಕೆಜಿಎಫ್ ಗಲ್ಲಾ ಪೆಟ್ಟಿಗೆಯಲ್ಲಿ ಕಮಾಲ್ ಮಾಡುತ್ತಿದೆ. ಅಲ್ಲದೇ, ಕೆಜಿಎಫ್ 2 ಚಿತ್ರ ಸಾವಿರ ಗಡಿದಾಡಿದ ಭಾರತೀಯ ಚಿತ್ರರಂಗದ ನಾಲ್ಕನೇ ಚಿತ್ರವಾಗಿದೆ. ಇದೀಗ ಈ ಚಿತ್ರದ ಸಕ್ಸ್ಸ್ ಕಂಡು ಹೆದರಿದ್ದೆ ಎಂದು ಬಾಲಿವುಡ್ ನಟ ಅಮೀರ್ ಖಾನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಭಾರತೀಯ ಚಿತ್ರರಂಗದಲ್ಲಿ ಹೊಸ ಹೊಸ ದಾಖಲೆಗಳನ್ನು ನಿರ್ಮಿಸುತ್ತಿರುವ ಕೆಜಿಎಫ್ 2 ಚಿತ್ರದ ಬಗ್ಗೆ ಅಮೀರ್ ಖಾನ್ ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಕೆಜಿಎಫ್ ಚಿತ್ರದ ಅಬ್ಬರ ಕಂಡು ಹೆದರಿದ್ದೆ. ಕೆಜಿಎಫ್ ಚಿತ್ರದ ಕಥೆಗೆ ಆಗಿದೆ ಎಂದು ಹೇಳಿದ್ದಾರೆ.
ಈ ಕುರಿತಂತೆ ಖ್ಯಾತ ಬಾಕ್ಸಾಫೀಸ್ ತಜ್ಞ ಹಿಮೇಶ್ ಮಂಕಂಡ್ ಅವರು ಬರೆದುಕೊಂಡಿದ್ದು, ಕೆಜಿಎಫ್ ಚಾಪ್ಟರ್ 2 ಚಿತ್ರ 1000 ಕೋಟಿ ಬಾಚಿ ಮುನ್ನಡೆಯುತ್ತಿದೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಈ ಸಾಧನೆ ಮಾಡಿದ ನಾಲ್ಕನೇ ಚಿತ್ರ ಎಂಬ ಕೀರ್ತಿಗೆ ಕೆಜಿಎಫ್ 2 ಭಾಜನವಾಗಿದೆ. ಈ ಹಿಂದೆ ದಂಗಲ್, ಬಾಹುಬಲಿ-2 ಮತ್ತು ಇತ್ತೀಚೆಗೆ ತೆರೆಕಂಡ RRR ಚಿತ್ರಗಳು ಈ ಸಾಧನೆ ಮಾಡಿದ್ದವು. ನಾಲ್ಕು ಅಂಕಿಗಳ ಗಳಿಕೆ ಕಂಡ ಮೊದಲ ಕನ್ನಡ ಮೂಲದ ಚಿತ್ರ. ನಿಜವಾಗಿಯೂ ಐತಿಹಾಸಿಕ ಎಂದು ಅವರು ಬಣ್ಣಿಸಿದ್ದಾರೆ.
ಇನ್ನು ಅಮೀರ್ ಖಾನ್ ಅಭಿನಯದ ದಂಗಲ್ ಚಿತ್ರ 2000 ಕೋಟಿ ಗಳಿಸಿ ಸಾರ್ವಕಾಲಿಕ ದಾಖಲೆ ಮಾಡಿದೆ. ಆದರೆ ಆ ಚಿತ್ರ ಹಿಂದಿಯಲ್ಲಿ 387 ಕೋಟಿ ರುಪಾಯಿ ಮಾತ್ರ ಗಳಿಕೆ ಮಾಡಿತ್ತು. ಇದು ಸದ್ಯದ ಮಟ್ಟಿಗೆ ಎರಡನೇ ಅಗ್ರ ಚಿತ್ರವಾಗಿದೆ. ಇದೀಗ 369 ಕೋಟಿ ಗಳಿಸಿರುವ ಕೆಜಿಎಫ್ ಚಿತ್ರ ಇದೇ ವಾರದಲ್ಲಿ ಈ ದಾಖಲೆಯನ್ನು ಉಡೀಸ್ ಮಾಡಬಹುದು.
ಕೆಜಿಎಫ್ ಚಾಪ್ಟರ್ 2 ಚಿತ್ರ ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಎರಡನೇ ವಾರದಲ್ಲಿ 203 ಕೋಟಿ ರೂ. ಗಳಿಕೆ ಮಾಡಿದ್ದು, ಕಳೆದ ವಾರಾಂತ್ಯಕ್ಕೆ 826 ಕೋಟಿ. ಗಳಿಕೆ ಮಾಡಿತ್ತು. ಬಿಡುಗಡೆಯಾದಾಗಿನಿಂದ, ಕೆಜಿಎಫ್ ಚಾಪ್ಟರ್ 2 ಸತತವಾಗಿ ನಾಲ್ಕು ದಿನಗಳವರೆಗೆ ಪ್ರತಿದಿನ ಶತಕ (100 ಕೋಟಿ ರೂ ಗಳಿಕೆ)ವನ್ನು ತಲುಪಿದ ಭಾರತದ ಮೊದಲ ಚಲನಚಿತ್ರವಾಗಿದೆ. ಹಾಗೆಯೇ, ಭಾರತದಲ್ಲಿ ಅತಿ ಹೆಚ್ಚು ಓಪನಿಂಗ್ ಕಲೆಕ್ಷನ್ ಗಳಿಸಿದ ಚಿತ್ರಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.