No Result
View All Result
ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದಲ್ಲಿ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಕೆಲವೇ ಹೊತ್ತಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ ನಟ ಸುರೇಶ್ ಗೋಪಿ.
ಪ್ರಮಾಣವಚನ ಸ್ವೀಕಾರ ಬಳಿಕ ಮಲಯಾಳಂ ಟಿವಿ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ತಮ್ಮನ್ನು ಸಚಿವ ಸ್ಥಾನದಿಂದ ಮುಕ್ತಗೊಳಿಸುತ್ತಾರೆ ಎಂಬ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.
ನಾನು ಸಂಸದನಾಗಿಯೇ ಕೆಲಸ ಮಾಡಲು ಬಯಸುತ್ತೇನೆ. ನನಗೆ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ಬೇಡ ಎನ್ನುವುದು ನನ್ನ ನಿಲುವಾಗಿತ್ತು. ನನಗೆ ಕ್ಯಾಬಿನೆಟ್ ಸಚಿವ ಸ್ಥಾನದಲ್ಲಿ ಆಸೆ ಇಲ್ಲ ಎಂದು ನನ್ನ ಪಕ್ಷಕ್ಕೂ ಹೇಳಿದ್ದೆ. ನನ್ನನ್ನು ಸಚಿವ ಸ್ಥಾನದಿಂದ ಆದಷ್ಟು ಬೇಗ ಮುಕ್ತಗೊಳಿಸುತ್ತಾರೆ ಎಂದು ಭಾವಿಸಿದ್ದೇನೆ.ತ್ರಿಶೂರ್ ಕ್ಷೇತ್ರದ ಜನತೆಗೆ ನನ್ನ ಬಗ್ಗೆ ಚೆನ್ನಾಗಿ ಗೊತ್ತಿದೆ. ನಾನು ಸಂಸದನಾಗಿ ಚೆನ್ನಾಗಿ ಕೆಲಸ ಮಾಡಬಲ್ಲೆ. ನಾನು ಸಿನಿಮಾಗಳಲ್ಲಿ ನಟನೆ ಮಾಡ್ಬೇಕು. ಪಕ್ಷ ನಿರ್ಧಾರ ಮಾಡಲಿ
ಎಂದು ಸಚಿವ ಸುರೇಶ್ ಗೋಪಿ ಅವರು ಹೇಳಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಕೇರಳದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿಯಿಂದ ಗೆದ್ದಿರುವ ಸಂಸದ ಸುರೇಶ್ ಗೋಪಿ ಮತ್ತು ಕೇರಳದಿಂದಲೇ ಆಯ್ಕೆಯಾಗಿ ಕೇಂದ್ರ ಸಚಿವರಾದ ಮೊದಲ ಬಿಜೆಪಿ ನಾಯಕ ಎಂಬ ಹೆಗ್ಗಳಿಕೆ ಸುರೇಶ್ ಗೋಪಿ ಅವರದ್ದು.
No Result
View All Result
error: Content is protected !!