2021ರ ಸಾಲಿನ ಯಪಿಎಸ್ಸಿ ಪರೀಕ್ಷಾ ಫಲಿತಾಂಶ ಪ್ರಕಟ ಆಗಿದೆ. 685 ಮಂದಿ ಯುಪಿಎಸ್ಸಿ ಪಾಸ್ ಮಾಡಿದ್ದಾರೆ. ಯುಪಿಎಸ್ಸಿ ಪರೀಕ್ಷೆ ಅಂದ್ರೆ ಅಂದು ಐಎಎಸ್ ಪರೀಕ್ಷೆ ಎಂದೇ ಜನಜನಿತ. ಸಾಮಾನ್ಯವಾಗಿ ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿದ್ದಾರೆ ಅನ್ನುವುದಕ್ಕಿಂತಲೂ ಐಎಎಸ್ ಪಾಸ್ ಮಾಡಿದ್ದಾರೆ ಎಂದು ಹೇಳುವುದು ವಾಡಿಕೆ.
ಆದರೆ ಯಪಿಎಸ್ಸಿ ಪರೀಕ್ಷೆ ಎಂದು ಕೇವಲ ಐಎಎಸ್ ಪರೀಕ್ಷೆ ಮಾತ್ರವಲ್ಲ, ಐಎಫ್ಎಸ್, ಐಪಿಎಸ್, ಎ ಗ್ರೂಪ್ ಕೇಂದ್ರ ಸೇವೆಗಳು ಮತ್ತು ಬಿ ಗ್ರೂಪ್ ಕೇಂದ್ರ ಸೇವೆಗಳಿಗೂ ಇದೇ ಪರೀಕ್ಷೆಯ ಮೂಲಕವೇ ನೇಮಕಾತಿ ಮಾಡಲಾಗುತ್ತದೆ.
ಹಾಗಾದರೆ ಐಎಎಸ್, ಐಎಫ್ಎಸ್, ಐಪಿಎಸ್ ಅಧಿಕಾರಿಗಳ ಸಂಬಳ ಎಷ್ಟಿರುತ್ತದೆ ಎನ್ನುವುದು ಎಲ್ಲರ ಕುತೂಹಲ.
ಐಎಎಸ್ ಅಧಿಕಾರಿಗಳ ಆರಂಭಿಕ ವೇತನ – 56 ಸಾವಿರ ರೂಪಾಯಿ. ಅತ್ಯಧಿಕ ವೇತನ – 2,50,000 ರೂಪಾಯಿ.
ಏಳನೇ ವೇತನ ಆಯೋಗದ ಶಿಫಾರಸ್ಸಿನ ಐಎಎಸ್ ಅಧಿಕಾರಿಗಳಿಗೆ ಪ್ರಕಾರ ಹುದ್ದೆಗಳಿಗೆ ಮತ್ತು ವೇತನ:
ಉಪ ವಿಭಾಗಾಧಿಕಾರಿ: ಸೇವಾವಧಿ: 1-4 ವರ್ಷ – 56,100 ರೂಪಾಯಿ
ಹೆಚ್ಚುವರಿ ಜಿಲ್ಲಾಧಿಕಾರಿ: ಸೇವಾವಧಿ: 5-8 ವರ್ಷ – 67,700 ರೂಪಾಯಿ
ಜಿಲ್ಲಾಧಿಕಾರಿ: ಸೇವಾವಧಿ: 9-12 ವರ್ಷ – 78,800 ರೂಪಾಯಿ
ಜಿಲ್ಲಾಧಿಕಾರಿ (ವಿಶೇಷ ಕಾರ್ಯದರ್ಶಿಗೆ ಸರಿಸಮಾನದ ಹುದ್ದೆ) – ಸೇವಾವಧಿ: 13-16 ವರ್ಷ – 1,18,500 ರೂಪಾಯಿ
ಪ್ರಾದೇಶಿಕ ಆಯುಕ್ತರು (ವಿಶೇಷ ಕಾರ್ಯದರ್ಶಿಗೆ ಸರಿಸಮಾನದ ಹುದ್ದೆ) – ಸೇವಾವಧಿ: 16-24 ವರ್ಷ – 1,44,200 ರೂಪಾಯಿ
ಪ್ರಾದೇಶಿಕ ಆಯುಕ್ತರು (ಪ್ರಧಾನ ಕಾರ್ಯದರ್ಶಿಗೆ ಸರಿಸಮಾನದ ಹುದ್ದೆ) – ಸೇವಾವಧಿ: 25-30 ವರ್ಷ – 1,82,200 ರೂಪಾಯಿ
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ : ಸೇವಾವಧಿ: 30-33 ವರ್ಷ – 2,05,400 ರೂಪಾಯಿ
ಮುಖ್ಯ ಕಾರ್ಯದರ್ಶಿ: (ಕೇಂದ್ರ ಸರ್ಕಾರದಲ್ಲಿ ಸಚಿವಾಲಯದ ಕಾರ್ಯದರ್ಶಿ ಹುದ್ದೆ) – ಸೇವಾವಧಿ: 34-36 ವರ್ಷ – 2,25,000 ರೂಪಾಯಿ
ಭಾರತದ ಸಂಪುಟ ಕಾರ್ಯದರ್ಶಿ (ಕೇಂದ್ರ ಸರ್ಕಾರದಲ್ಲಿ ಮಾತ್ರ ಈ ಹುದ್ದೆ ಇರುವುದು) – ಸೇವಾವಧಿ 37+ : 2,50,000 ರೂಪಾಯಿ
ಮೂಲವೇತನದ ಜೊತೆಗೆ ತುಟ್ಟಿಭತ್ಯೆ, ಮನೆ ಭತ್ಯೆ, ಮನೆ ಸಹಾಯಕರು, ದೂರವಾಣಿ ಖರ್ಚು, ಪ್ರಯಾಣ ಭತ್ಯೆಯೂ ಲಭಿಸುತ್ತದೆ.
ಐಪಿಎಸ್ ಅಧಿಕಾರಿಗಳ ಆರಂಭಿಕ ಸಂಬಳ ಕೂಡಾ 56 ಸಾವಿರ ರೂಪಾಯಿಯೇ. ಗರಿಷ್ಠ ವೇತನ ರಾಜ್ಯಗಳಲ್ಲಿ ಡಿಜಿಪಿ ಅವರಿಗೆ 2,23,000 ರೂಪಾಯಿ. ದೆಹಲಿ ಪೊಲೀಸ್ ಆಯುಕ್ತರ ಹುದ್ದೆಯನ್ನು ರಾಜ್ಯಗಳಲ್ಲಿ ಡಿಜಿಪಿ ಹುದ್ದೆಗೆ ಸರಿಸಮಾನ ಹುದ್ದೆ ಎಂದು ಪರಿಗಣಿಸಲಾಗುತ್ತದೆ.
ಯುಪಿಎಸ್ಸಿ ಪರೀಕ್ಷೆ ಪಾಸಾದ ಬಳಿಕ ಲಾಲ್ ಬಹದ್ದೂರ್ ಶಾಸ್ತಿç ಅಕಾಡೆಮಿಯಲ್ಲಿ ತರಬೇತಿ ನೀಡಲಾಗುತ್ತದೆ. ಈ ತರಬೇತಿ ವೇಳೆ 55 ಸಾವಿರ ರೂಪಾಯಿ ವೇತನ ನಿಡಲಾಗುತ್ತದೆ. ಆದರೆ ಈ ವೇತನದಲ್ಲಿ ಯೂನಿಫಾರಂ ಒಳಗೊಂಡAತೆ ಇತರೆ ವೆಚ್ಚವನ್ನು ವೇತನದಲ್ಲೇ ಕಡಿತಗೊಳಿಸಲಾಗುತ್ತದೆ. ಹೀಗಾಗಿ ಐಎಎಸ್ಗಳು ತರಬೇತಿ ವೇಳೆ ಡ್ರಾ ಮಾಡಿಕೊಳ್ಳಬಹುದಾದ ವೇತನ 44,000 ರೂಪಾಯಿ.
ಯುಪಿಎಸ್ಸಿ ಪರೀಕ್ಷೆಯಲ್ಲಿ ಪಾಸಾಗುವುದೇ ತಪಸ್ಸು. ಐಎಎಸ್, ಐಪಿಎಸ್, ಐಎಫ್ಎಸ್ ಹುದ್ದೆಗೇರುವುದೆಂದರೆ ಅದೊಂದು ಗರ್ವ, ಹೆಮ್ಮೆ. ಐಎಎಸ್ ಅಧಿಕಾರಿ ಮೇಲ್ವಿಚಾರಣೆಯಲ್ಲಿ ಇಡೀ ಜಿಲ್ಲೆಯ ಆಡಳಿತವಿದ್ದರೆ, ಐಪಿಎಸ್ ಅಧಿಕಾರಿಯ ಮೇಲ್ವಿಚಾರಣೆಯಲ್ಲಿ ಇಡೀ ಜಿಲ್ಲೆಯ ಕಾನೂನು ಸುವ್ಯವಸ್ಥೆ ಇರುತ್ತದೆ. ಒಂದರ್ಥದಲ್ಲಿ ಹೇಳುವುದಾದರೆ ಐಎಎಸ್ ಅಧಿಕಾರಿಗೆ ಜಿಲ್ಲೆಗೆ ಮುಖ್ಯಮಂತ್ರಿ, ಐಪಿಎಸ್ ಅಧಿಕಾರಿ ಜಿಲ್ಲೆಯ ಗೃಹ ಮಂತ್ರಿ.
ADVERTISEMENT
ADVERTISEMENT